ಹಿರಿಯಡ್ಕ: ಹಿರಿಯಡ್ಕದ ಅಂಜಾರು ಗ್ರಾಮದಲ್ಲಿ ಅ.6ರಂದು ರಾತ್ರಿ ಬೀಸಿದ ಗಾಳಿಯ ರಭಸಕ್ಕೆ ಮಮತ ಪೂಜಾರ್ತಿ ಹಾಗೂ ಕರಂಬಾಕ್ಯಾರು ಕೃಷ್ಞಪ್ಪ ಪೂಜಾರಿ ಅವರ ಮನೆಯ ಮೇಲೆ ಮರಗಳು ಬಿದ್ದು ಸಿಮೆಂಟ್ ಶಿಟ್ ಹಾಗೂ ಹಂಚುಗಳು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದ್ದು ನಮ ಬಿರುವೆರ್ ಹಿರಿಯಡಕ ಇದರ ಸಂಘಟನೆಯ ಪದಾಧಿಕಾರಿಗಳು ತುರ್ತು ಭೇಟಿ ನೀಡಿ ಮನೆಯವರಿಗೆ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರಧಾನ ಕಾರ್ಯಧರ್ಶಿ ರವಿ ಎಸ್. ಪೂಜಾರಿ ಹಿರಿಯಡಕ, ಕಾರ್ಯಧರ್ಶಿ ಶಿವಪ್ರಕಾಶ್ ಪೂಜಾರಿ, ಕೋಶಾಧಿಕಾರಿ ವಿನುತ್ ಪೂಜಾರಿ, ಸಂಘಟನ ಕಾರ್ಯಧರ್ಶಿ ಸುಧಾಕರ ಪೂಜಾರಿ, ಸದಸ್ಯರುಗಳಾದ ಸುಕೇಶ್ ಪೂಜಾರಿ ಅಂಜಾರು, ಪ್ರಕಾಶ್ ಪೂಜಾರಿ ಪೆರ್ಡೂರು, ಶಿವಾನಂದ ಪೂಜಾರಿ, ಸತೀಶ್ ಪೂಜಾರಿ ಕೊಳಲಗಿರಿ ಮುಂತಾದವರು ಉಪಸ್ಥಿತರಿದ್ದರು.