ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಶರೀರ ಸ್ವಚ್ಚತೆ ಕಾಪಾಡಲು ಸಮಸ್ಯೆ ಎದುರಾಗಿದೆ. ಸೆಲೂನ್ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿವುದರಿಂದ ಎಲ್ಲರು ಗಡ್ಡಧಾರಿಗಳಾಗಿದ್ದರು. ಇದರಿಂದ ಇವರೆಲ್ಲರೂ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಬೆಳೆದು ನಿಂತಿರುವ ಗಡ್ಡದಿಂದಾಗಿ ಸೆಖೆಯಲ್ಲಿ ಕೆಲವರಿಗೆ ತುರಿಕೆ, ಕೆಲವರ ಗಡ್ಡದಲ್ಲಿ ಹೇನಿನ ಸಂಚಾರ, ಚರ್ಮವ್ಯಾಧಿಯ ಲಕ್ಷಣಗಳು, ಊಟ ಮಾಡುವವಾಗ ಮೀಸೆ ಗಡ್ಡಗಳಿಗೆ ಅಂಟಿಕೊಳ್ಳುವ ಅನ್ನ ಸಾಂಬರು, ಅಂದ ಕಳೆದಿರುವ ಮುಖ ಸೌಂದರ್ಯ. ಇವುಗಳೆಲ್ಲ ಸಮಸ್ಯೆಗಳು ಸೇವಿಂಗ್ ಮಾಡಿಕೊಳ್ಳಲು ಅಸಹಾಯಕತೆ ಎದುರಾದರಿಂದ ವಲಸೆ ಕಾರ್ಮಿಕರು ಎದುರಿಸಬೇಕಾಯಿತು.
ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ವಲಸೆ ಕಾರ್ಮಿಕರ ಅಳಲಿಗೆ ಸ್ಪಂದಿಸಿತು. ನಗರದ ಇಂದಿರಾ ಕ್ಯಾಂಟೀನ್ ಬಳಿ ಗಡ್ಡ ಬಿಟ್ಟಿರುವ ವಲಸೆ ಕಾರ್ಮಿಕರಿಗೆ ಬೆಳೆದು ನಿಂತಿರುವ ಗಡ್ಡ ಬೊಳಿಸಿಕೊಳ್ಳಲು, ಬೇಕಾದ ಯಂತ್ರ ಪರಿಕರಗಳ ವಿತರಣೆ ಉಚಿತವಾಗಿ ನಡೆಸಿದರು. ಸೇವಿಂಗ್ ಮಿಷನ್, ಸಾಬೂನು, ಬ್ಲೆಡ್, ಬ್ರೆಶ್ ಮೊದಲಾದ ಪರಿಕರಗಳು ಶೇವಿಂಗ್ ಕಿಟ್ ನಲ್ಲಿ ಇದ್ದವು. ಒಟ್ಟು 100 ಜನ ವಲಸೆ ಕಾರ್ಮಿಕರಿಗೆ ಸೇವಿಗ್ ಕಿಟ್ ವಿತರಿಸಲಾಯಿತೆಂದು ತಿಳಿದು ಬಂದಿದೆ.
ಸಂಚಾರ ಠಾಣಾಧಿಕಾರಿ ಆಬ್ದುಲ್ ಖಾದರ್ ಅವರು ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಉದ್ಯಮಿ ರಂಜನ್ ಕಾಲ್ಕೂರ, ಉಪಸ್ಥಿತರಿದ್ದರು. ಸೇವಿಂಗ್ ಯಂತ್ರ ಪರಿಕರಗಳನ್ನು ಎಸ್ ನಾಗೇಶ್ ಶೇಟ್ ಒದಗಿಸಿದರು. ವಲಸೆ ಕಾರ್ಮಿಕರ ಶಾರೀಕ ಸ್ವಚ್ಚತೆಗೆ ಸಹಕರಿಸಿರುವ ನಾಗರಿಕ ಸಮಿತಿಯ ಸೇವಾಕಾರ್ಯಕ್ಕೆ ವಲಸೆ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದರು.