ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಅಂಗವಾಗಿ ನಗರ ಭಜನೆ ಶನಿವಾರ ಸಂಜೆ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರ್ಣ ನದಿಗೆ ತೀರಕ್ಕೆ ತೆರಳಿ, ಅಲ್ಲಿಂದ ದೇವಾಲಯಕ್ಕೆ ಬಂದು ಸಂಪನ್ನಗೊಂಡಿತು.
ಭಕ್ತರು ನೀಡಿದ ಫಲ ವಸ್ತುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ , ವಿನೋದ ಕಾಮತ್, ಡಾ. ಪಾಂಡುರಂಗ ಕಿಣಿ, ದೇವಳದ ಅರ್ಚಕ ಜಯದೇವ ಭಟ್, ಗಣಪತಿಭಟ್, ಲಕ್ಷ್ಮೀಶ್, ಭಜನಾ ಸಪ್ತಾಹ ಸಮಿತಿಯ ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡರು.