ಆ. 6 ರಂದು ಹಿರಿಯ ವಿದ್ವಾಂಸ ನಾಡೋಜ ಪ್ರೊ. ಕೆ.ಪಿ.ರಾವ್ ಅಭಿನಂದನಾ ಕಾರ್ಯಕ್ರಮ

ಉಡುಪಿ: ನಾಡಿನ ಹಿರಿಯ ವಿದ್ವಾಂಸ ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ
ನಾಡೋಜ ಪ್ರೊ.ಕೆ.ಪಿ.ರಾವ್ ಅವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ
ತಾಲೂಕು ಘಟಕದ ಸಹಕಾರದೊಂದಿಗೆ ನಾಡೋಜ ಕೆ.ಪಿ.ರಾವ್ ಅಭಿನಂದನ ಸಮಿತಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಉಡುಪಿಯ ವಿವಿಧ ಸಂಘ -ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಗಸ್ಟ್ 6, ಭಾನುವಾರದಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಳಿಗ್ಗೆ ಗಂಟೆ 9.00 ರಿಂದ 1.15 ರವರೆಗೆ ನಡೆಯಲಿದೆ.

ಬೆಳಿಗ್ಗೆ ಗಂಟೆ 9.15 ರಿಂದ 9.45 ರವರೆಗೆ ಸರಿಗಮ ಭಾರತಿ ಪರ್ಕಳ ಇವರಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. 9.50 ರಿಂದ 10.30 ರವರೆಗೆ ಉದ್ಘಾಟನೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನುಡಿ ಸಂದೇಶ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಮಠಾಧಿಪತಿಗಳು, ಶ್ರೀ ಜೈನ ಮಠ ಮೂಡುಬಿದಿರೆ.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ, ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ನೀಲಾವರ ಸುರೇಂದ್ರ ಅಡಿಗ, ಪೂರ್ಣಿಮಾ, ಡಾ.ಪಿ.ವಿ ಭಂಡಾರಿ, ಉಡುಪಿ ವಿಶ್ವನಾಥ ಶೆಣೈ, ಜಯಕರ್ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.

10.30 ರಿಂದ 10.45 ರವರೆಗೆ ಡಾ. ಯು.ಬಿ.ಪವನಜ ಬೆಂಗಳೂರು ಕಂಪ್ಯೂಟರ್ ಮತ್ತು ಕೆ.ಪಿ.ರಾವ್ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. 10.45 ರಿಂದ 11.00 ರವರೆಗೆ ಪ್ರೊ. ವರದೇಶ ಹಿರೇಗಂಗೆರವರು ಕೆ.ಪಿ.ರಾವ್ ಬದುಕು ಹಾಗೂ ವರ್ಣಕ ಕಾದಂಬರಿ ಬಗ್ಗೆ ಹಾಗು 11.00 ರಿಂದ 11.05 ಡಾ. ಎನ್.ಟಿ.ಭಟ್ ಇವರು ಕೆ.ಪಿ.ರಾವ್‌ರೊಂದಿಗಿನ ಒಡನಾಟದ ಬಗ್ಗೆ ಮಾತನಾಡಲಿರುವರು.

11.05 ರಿಂದ 12.05 ರವರೆಗೆ ಕೆಪಿ ರಾವ್ ಅವರೊಂದಿಗೆ ಮಾತುಕತೆ ಎಂಬ ವಿಷಯದಲ್ಲಿ ಪಾದೆಕಲ್ಲು ವಿಷ್ಣು ಭಟ್, ಡಾ. ಮಹಾಲಿಂಗ ಭಟ್, ಡಾ. ನೀತಾ ಇನಾ೦ದಾರ್, ಡಾ.ಉದಯ ಶಂಕರ ಹೆಚ್.ಎನ್, ಸುಶ್ಮಿತಾ ಶೆಟ್ಟಿ, ಪಲ್ಲವಿ ಕೊಡಗು ಭಾಗವಹಿಸಲಿದ್ದಾರೆ. ಬಳಿಕ 12.05 ರಿಂದ 12.10 ರವರೆಗೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರಿಂದ ಹಾಡುಗಾರಿಕೆ. 12.15 ರಿಂದ 1.15 ರವರೆಗೆ ನಾಡೋಜ ಪ್ರೊ.ಕೆಪಿ ರಾವ್
ಅಭಿನಂದನ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ಡಾ.ಎಚ್.ಎಸ್ ಬಳ್ಳಾಲ್, ಅಭಿನಂದನ ಮಾತನ್ನು ಡಾ.ಜಯಂತ್ ಕಾಯ್ಕಿಣಿ ಮಾಡಲಿದ್ದಾರೆ.

ಡಾ.ಬಿ. ಜಗದೀಶ ಶೆಟ್ಟಿ, ಪ್ರೊ.ಸೇಡಿಯಾಪು ಜಯರಾಮ ಭಟ್, ಉಡುಪಿ ವಿಶ್ವನಾಥ ಶೆಣೈ, ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.

ನಾಡೋಜ ಕೆ. ಪಿ. ರಾವ್ ಅವರ ಕಿರು ಪರಿಚಯ: ಕಿನ್ನಿಕಂಬಳ ಪದ್ಮನಾಭ ರಾವ್ ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು (‘ನುಡಿ’ ವಿನ್ಯಾಸ) ರೂಪಿಸಿದ್ದು ಕೆ. ಪಿ. ರಾವ್ ಅವರ ಸಾಧನೆ. ಜನನ ಮತ್ತು ವಿದ್ಯಾಭ್ಯಾಸ : ಜನನ 1940 ರ ಫೆಬ್ರುವರಿ 29 ರಂದು, ಮಂಗಳೂರು ಬಳಿಯ
ಕಿನ್ನಿಕಂಬಳದಲ್ಲಿ. ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ. 1959ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.

ಕುಟುಂಬ: ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು 1964 ರಲ್ಲಿ. ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.

ಉದ್ಯೋಗ: ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. 1970ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ. ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್ಪ್ರೆಸ್ – ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ. ಸಾಧನೆಗಳು: ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ. ಕನ್ನಡದ ಪದಸಂಸ್ಕಾರಕ
ತಂತ್ರಾಂಶ ‘ಸೇಡಿಯಾಪು’ ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.

ಪ್ರಶಸ್ತಿ ಗೌರವಗಳು: ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ‘ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ’ವೆಂಬ ಮಾನ್ಯತೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. ಆಳ್ವಾಸ್ ನುಡಿಸಿರಿ 2009 ರಲ್ಲಿ ಸನ್ಮಾನ. 2012 ರಲ್ಲಿ ವಿಶ್ವಕರ್ಮ ಪ್ರಶಸ್ತಿ. 2013 ರಲ್ಲಿ ಕನ್ನಡ ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. 2013 ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ “ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್” ಪ್ರಕಟಣೆ, 2013 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ. 2021 ರಲ್ಲಿ ‘ಕಾರಂತ ಬಾಲವನ ಪ್ರಶಸ್ತಿ’ ಕೃತಿಗಳು: ರಾವ್ ಅವರು ‘ವರ್ಣಕ’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. 2021 ರಲ್ಲಿ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡಿದೆ.