ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ತಿಳಿಸುವ ಪದ್ಧತಿ ಇಲಾಖೆಯಲ್ಲಿ ಇಲ್ಲ ಎಂದು ಡಿಸಿಎಫ್ ಪ್ರಭುಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ಮೈಸೂರು (ಅ.29): ಮೈಸೂರು ದಸರಾದಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಪ್ರಮೋದಾದೇವಿ ಅವರು ಅಸಮಾಧಾನ ಹೊರ ಹಾಕಿ ಪತ್ರ ಬರೆದಿದ್ರು. ಅಂಬಾರಿ ಆನೆ ಆಯ್ಕೆ ಕುರಿತು ತಮಗೆ ಹೇಳಲಿಲ್ಲ ಎಂಬ ಪ್ರಮೋದಾ ದೇವಿ ಒಡೆಯರ್ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಡಿಸಿಎಫ್ ಪ್ರಭುಗೌಡ ಸ್ಪಷ್ಟೀಕರಣ ನೀಡಿ ಪತ್ರ ಬರೆದಿದ್ದಾರೆ. ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ಲಿಖಿತವಾಗಿ ಅಥವಾ ಔಪಚಾರಿಕವಾಗಿ ಅಧಿಕೃತವಾಗಿ ಹೇಳುವ ಪದ್ಧತಿ ಇಲಾಖೆಯಲ್ಲಿ ಇಲ್ಲ ಎಂದಿದ್ದಾರೆ.
ದೂರವಾಣಿ ಮೂಲಕ ಅಗತ್ಯ ಮಾಹಿತಿ
ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ತಿಳಿಸುವ ಪದ್ಧತಿ ಇಲಾಖೆಯಲ್ಲಿ ಇಲ್ಲ ಎಂದು ಡಿಸಿಎಫ್ ಪ್ರಭುಗೌಡ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ ಸಮನ್ವಯ ದೃಷ್ಟಿಯಿಂದ ಅಕ್ಟೋಬರ್ 11 ಮತ್ತು 12 ರಂದು ದೂರವಾಣಿ ಮೂಲಕ ಅಗತ್ಯ ಮಾಹಿತಿ ಕೊಟ್ಟಿದ್ದೇವೆ. ದಿನಾಂಕ 12-10-2026 ರ ಸಂಜೆ 5.44ಕ್ಕೆ ರಾಜಾಮಾತೆ ಪ್ರಮೋದಾದೇವಿ ಒಡೆಯರ್ಗೆ ದೂರವಾಣಿ ಮೂಲಕ ವಿವರಿಸಲಾಗಿದೆ. 13-10-2026 ರಂದು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದ್ರು.
ಯಾಕೆ ಮಹೇಂದ್ರ ಆನೆ ಆಯ್ಕೆ ಮಾಡಲಿಲ್ಲ
ಮಹೇಂದ್ರ ಆನೆ ಆಯ್ಕೆ ವಿಚಾರದಲ್ಲಿ ಏನೇನು ಆಯಿತು. ಯಾಕೆ ಮಹೇಂದ್ರ ಆನೆ ಆಯ್ಕೆ ಆಗಲಿಲ್ಲ. ಪ್ರಶಾಂತ ಆನೆ ಆಯ್ಕೆಗೆ ಯಾವೆಲ್ಲಾ ಮಾನದಂಡಗಳನ್ನ ಪರಿಗಣಿಸಲಾಗಿದೆ ಎನ್ನುವ ಬಗ್ಗೆ ಸುದೀರ್ಘವಾಗಿ ಪತ್ರ ಬರೆದು ಡಿಸಿಎಫ್ ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ.















