ಬೆಂಗಳೂರು: ಸ್ಯಾಂಡಲ್ ವುಡ್ ನ ಕೆಲ ನಟ ನಟಿಯರಿಗೆ ಡ್ರಗ್ಸ್ ದಂಧೆಯ ನಂಟಿರುವ ಕುರಿತಂತೆ ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಸಿಸಿಬಿ ಪೊಲೀಸರಿಗೆ ಯಾವ ದಾಖಲೆ ನೀಡಿದೆ, ಏನು ಹೇಳಿದ್ದೇನೆ ಎಂಬುವುದನ್ನು ಈಗಲೇ ಹೇಳಲು ಆಗಲ್ಲ. ತನಿಖೆಗೆ ಯಾವುದೇ ಅಡ್ಡಿ ಆಗಬಾರದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಸಿಬಿ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದೇನೆ. ತನಿಖೆ ಅನುಕೂಲವಾಗುವ ಮಾಹಿತಿ ನೀಡಿದ್ದೇನೆ. ನನ್ನ ಬಳಿ ಹಾರ್ಡ್ ಡಿಸ್ಕ್, ಐಪ್ಯಾಡ್ ಇದೆ. ಅದರೊಳಗೆ ಏನಿದೆ ಎಂದು ಹೇಳಲು ಆಗಲ್ಲ ಎಂದು ತಿಳಿಸಿದರು.
ಕೆಲ ಡ್ರಗ್ಸ್ ಎಡಿಕ್ಟ್ ಗಳಿಂದ ಇಡೀ ಸ್ಯಾಂಡಲ್ ವುಡ್ ಗೆ ಕೆಟ್ಟ ಹೆಸರು ಬರಬಾರದು. ತನಿಖೆಯಿಂದ ಸತ್ಯ ಹೊರಬರಬೇಕು. ಇದರಿಂದ ಚಿತ್ರರಂಗ ಸ್ವಚ್ಛ ಆಗುತ್ತೇ. ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಇದು ನನ್ನ ಹೋರಾಟ ಎಂದು ಹೇಳಿದರು.