ಬೆಂಗಳೂರು: ನಮ್ಮ ಅಕ್ಕ ಗೌರಿ ಲಂಕೇಶ್ ಅವರ ಸಿದ್ಧಾಂತವನ್ನು ಹಲವಾರು ಒಪ್ಪಿರಬಹುದು. ಇನ್ನಷ್ಟು ಮಂದಿ ಒಪ್ಪದೆಯೂ ಇರಬಹುದು. ಆದರೆ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಪ್ರಮೋದ್ ಮುತಾಲಿಕ್ ಗೆ ನನ್ನ ಅಕ್ಕನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿಯ ಸಾವು ಕೂಡ ನಿಜವಾದ ಸಾವು. ಸಿದ್ದಾಂತ ಬೇರೆ ಆಗಿರಬಹುದು. ಆದರೆ ಅವರ ಘನತೆಗೆ ಧಕ್ಕೆಬರುವಂತಹ ಹೇಳಿಕೆ ನೀಡಬಾರದು ಎಂದು ಭಾವುಕರಾದರು.
ನಾನು ಮೊನ್ನೆ ಯುವನಟನ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂಬ ಪ್ರಶ್ನೆ ಎತ್ತಿದ್ದೇ. ಇದರಿಂದ ಆತನ ಕುಟುಂಬದವರಿಗೆ ಬೇಸರ ಆಗಿದ್ದರಿಂದ ಈ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದೇನೆ ಎಂದರು.