ಉಡುಪಿ:ಒಮಾನ್, ಮಸ್ಕತ್ ನಲ್ಲಿ ಪ್ರಪ್ರಥಮ ಬಾರಿಗೆ ಪ್ರಥಮ್ ಕಾಮತ್ ಜಾದೂ ಪ್ರದರ್ಶನ

ಉಡುಪಿ:ಕಟಪಾಡಿ ಯ ಯುವ ಕಲಾವಿದ, ಜಾದೂಗಾರ ಪ್ರಥಮ್ ಕಾಮತ್ ಇವರ ಜಾದೂ ಪ್ರದರ್ಶನ ಮಸ್ಕತ್ ನಲ್ಲಿ ಸೆಪ್ಟೆಂಬರ್ 19 ರಂದು ನಡೆಯಲಿದೆ.

ಕರ್ನಾಟಕ ಜಾನಪದ ಪರಿಷತ್ತು ಒಮಾನ್ ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿದೆ.ಒಮಾನ್ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಪ್ರಥಮ್ ಕಾಮತ್ ಪ್ರಸ್ತುತ MAHE ಯಲ್ಲಿ optometry ಕಲಿಯುತ್ತಿದ್ದು,ಇವರು ಜಾದೂ ಕಲೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ.ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭ ಬಳಿಕ ಮಧ್ಯಾಹ್ನ 3ಗಂಟೆಗೆ ಸ್ಕೂಲ್ ಲೀಡರ್ ಚಲನಚಿತ್ರ ಪ್ರದರ್ಶನವು ಜರುಗಲಿರುವುದು.
ಚಿತ್ರ ತಂಡದ ಸತ್ಯೇಂದ್ರ ಪೈ, ರಝಾಕ್ ಪುತ್ತೂರು,ಮೋಹನ್ ಪಡ್ರೆ, ಗಣೇಶ್ ಕಿಣಿ, ಪ್ರಕಾಶ್ ಸುವರ್ಣ,ನಾಗೇಶ್ ಕಾಮತ್ ಕಟಪಾಡಿ ಹಾಗೂ ಪ್ರಥಮ್ ಕಾಮತ್ ಇವರು ಭಾಗವಹಿಸಲಿರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.