ಹಿರಿಯಡಕ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಬಂಧನ

ಉಡುಪಿ: ಹಿರಿಯಡಕ ಪೇಟೆಯಲ್ಲಿ ಸೆ. 24 ರಂದು ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಇನ್ನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಮಂಗಳೂರು ಕಾಟಿಪಳ್ಳ ಗ್ರಾಮದ ಸಚಿನ್ ಡಿ. ಅಮೀನ್ ಯಾನೆ ಸಚ್ಚು (37), ಇದೇ ಗ್ರಾಮದ ಅಕ್ಷಯ್ ಶೆಟ್ಟಿಗಾರ್ (26), ಮಂಗಳೂರು ತೋಕೂರು ಗ್ರಾಮದ ನಿವಾಸಿ ಚೇತನ್ ಯಾನೆ ಚೇತು (23) ಹಾಗೂ ಮಂಗಳೂರು ಕಾಟಿಪಳ್ಳ ಗ್ರಾಮದ ಸಂಜಿತ್ ಪ್ರದಾನ್ ಯಾನೆ ಶೈಲೇಶ್ (19) ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ಸುರತ್ಕಲ್ ಬಳಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತ ಸಚಿನ್ ಡಿ. ಅಮೀನ್ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದ್ದು, ಇತನ ವಿರುದ್ಧ ಕೊಲೆ, ಕೊಲೆಗೆ ಪ್ರಯತ್ನ, ಅಪಹರಣ, ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಮಂದಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.