ಕಾರ್ಕಳ: ಮಕ್ಕಳ ಸ್ವಾಸ್ಥ್ಯ ರಕ್ಷಣೆ ಹಾಗೂ ವ್ಯಾಧಿ ಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಆಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯಪ್ರಾಶನದ ಬಿಂದುಗಳನ್ನು 16 ವರ್ಷದೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯ ನಕ್ಷತ್ರವಾದ ಮೇ 8 ರಂದು ನೀಡಲಾಗುತ್ತಿದೆ.
ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಮುಖ್ಯ ರಸ್ತೆಯ ಯೆನಪೋಯ ಮಾಲ್‌ನಲ್ಲಿ ಹಾಗೂ ವಿ.ಟಿ ರಸ್ತೆಯ ರಾಮಕೃಷ್ಣ ಧರ್ಮ ವೈದ್ಯಾಶ್ರಮ ಶಾಖೆ, ಮೈಸೂರಿನ ಎನ್‌ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಂ.ಎ ಸ್ಟೋರ್ ಕಟ್ಟಡ ಹಾಗೂ ರಾಜ್ಯದಾದ್ಯಂತ ಇರುವ ಪ್ರತಿನಿಧಿ ವೈದ್ಯರ ಚಿಕಿತ್ಸಾಲಯಗಳಲ್ಲಿ ಹಿರಣ್ಯಪ್ರಾಶನದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಪ್ರತೀ ತಿಂಗಳೂ ಸುಮಾರು ಐದು ಸಾವಿರ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು, ಅಭಿಪ್ರಾಯ ಸಂಗ್ರಹಣೆ ಮಾಡಿದಾಗ ಕನಿಷ್ಠ ಆರು ಬಾರಿ ಉಪಯೋಗಿಸಿದ ಮಕ್ಕಳಲ್ಲಿ ವಿಶೇಷವಾಗಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮತ್ತು ಬುದ್ಧಿಮತ್ತೆಯನ್ನು ವರ್ಧಿಸುವಲ್ಲಿಅತ್ಯುಪಯುಕ್ತವಾಗಿರುವುದು ಕಂಡು ಬಂದಿದೆ ಮತ್ತು ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.
ಸಾರ್ವಜನಿಕರೆಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.