ಮುನಿಯಾಲು: ಫೆ.19ರಿಂದ 21ರವರೆಗೆ ಶ್ರೀಮನ್ನಾಗಮಂಡಲ ಪವಿತ್ರ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ವಿತರಣೆ

ಉಡುಪಿ: ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19ರಿಂದ 21ರವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲ ಪವಿತ್ರ ಕಾರ್ಯಕ್ರಮವಾಗಿದ್ದು, ಭಕ್ತರು ಕುಟುಂಬ ಸಮೇತ ಭಾಗವಹಿಸಬೇಕು ಎಂದು ಶ್ರೀಮನ್ನಾಗಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್‌.ಆರ್. ದಾಮೋದರ ಶರ್ಮಾ ಬಾರ್ಕೂರು ಹೇಳಿದರು.

ಧಾರ್ಮಿಕ ಮುಖಂಡ ಭಾಸ್ಕರ ಜೋಯಿಸ್ ಮಾತನಾಡಿದರು. ಎಲ್ಲರಿಗೂ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಹೆಬ್ರಿಯ ಟಿ.ಜಿ. ಆಚಾರ್ಯ, ಮುನಿಯಾಲು ಗೋಧಾಮದ ರಕ್ಷತ್ ಆರ್. ಆಚಾರ್, ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಎಚ್‌.ಕೆ. ಸುಧಾಕರ್, ರವೀಂದ್ರ ಪುರೋಹಿತ್ ಹೆಬ್ರಿ, ದಿನೇಶ ಶೆಟ್ಟಿ, ಶ್ರೀರಾಮ ಮಂಟಪದ ಅಧ್ಯಕ್ಷ ನರೇಂದ್ರ ನಾಯಕ್, ಹೆಬ್ರಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೇಶವ ಆಚಾರ್ಯ, ಪೂರ್ವಾಧ್ಯಕ್ಷರು, ವಿಶ್ವಕರ್ಮ ಮಹಿಳಾ ಮಂಡಳಿಯ ಪದಾಧಿಕಾರಿಗಳು, ವಿಶ್ವಕರ್ಮ ಯುವವೃಂದದ ಪದಾಧಿ ಕಾರಿಗಳು, ಶ್ರೀರಾಮ ಭಜನಾ ಮಂಡಳಿ ಸೀತಾನದಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.