ಉಡುಪಿ: ಮುನಿಯಾಲು ಆಯುರ್ವೇದ ಸಂಸ್ಥೆ ವತಿಯಿಂದ ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜು. 16ರಂದು ಆಸಕ್ತ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಜಾತಿಯ ಔಷಧೀಯ ಗುಣಗಳುಳ್ಳ ಮರ, ಗಿಡ, ಬಳ್ಳಿಗಳ ಸಸಿಗಳ ವಿತರಣೆ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 4ರ ತನಕ ಉಚಿತವಾಗಿ ಮರಗಳಾದ ವಾಟೆಹುಳಿ, ರಾಮಪತ್ರೆ, ಬಿಲ್ವಪತ್ರೆ, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ಗಾರ್ಡನ್ ಅಶೋಕ, ತೇಗ, ನೇರಳೆ, ತಾರೆಕಾಯಿ, ನೊರೆಕಾಯಿ, ಅತ್ತಿಮರ, ರಂಜೆ, ಬಳ್ಳಿ ಮತ್ತು ಗಿಡಗಳಾದ ಹಿಪ್ಪಲಿ, ಅಮೃತಬಳ್ಳಿ, ಸಂಧಿಬೀಳು, ಲಾವಂಚ ಮತ್ತಿತರ ಸಸಿಗಳನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.