ಮುನಿಯಾಲು: ಮೇ 13-14 ರಂದು ಮೈಸೂರಿನಲ್ಲಿ ಜರುಗಿದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿ- 3ರಲ್ಲಿ ಭಾಗವಹಿಸಿದ್ದ ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.
ಶಾಸ್ತ್ರೀಯ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಚೈತನ್ಯಾ, ಮಯೂರಿ, ಮೇಘನ, ಪ್ರಸಿದ್ಧಿ, ರಕ್ಷಿತಾ, ಸ್ಟೀವಾ, ಛಾಯ, ಆರ್‌ಎಸ್ ಶಾಲಿನಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಏಕಾಂಕ ನಾಟಕಸ್ಪರ್ಧೆಯಲ್ಲಿ ಆಮೋದ್, ಮಯೂರಿ, ಚೈತನ್ಯಾ, ಪವನ್, ರಕ್ಷಿತ್, ಪ್ರಸಿದ್ಧಿ, ಛಾಯ, ಚೈತ್ರ, ಹರ್ಷಿತ, ವೀಣಾ, ಶ್ರೀನಿಧಿ, ಶ್ರೇಯ, ಮನೋಹರ್ ಅವರು ಸ್ವತಃ ರಚಿಸಿದ ದೂತವಾಕ್ಯ ನಾಟಕ ಪ್ರದರ್ಶಿಸಿದ್ದು, ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಉತ್ತಮ ನಟ ಪ್ರಶಸ್ತಿಯನ್ನು ಕೃಷ್ಣ ಪಾತ್ರ ಮಾಡಿದ ಚೈತನ್ಯಾ ತನ್ನದಾಗಿಸಿಕೊಂಡಿದ್ದು, ಶ್ರೀಪಾದ ಭಟ್ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.