ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜು.7 ರವರೆಗೆ ಮಕ್ಕಳಿಗೆ ಉಚಿತ ತಪಾಸಣಾ, ಚಿಕಿತ್ಸಾ ಶಿಬಿರ

ಮಣಿಪಾಲ: ಮಣಿಪಾಲದ ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಜತ ಮಹೋತ್ಸವ ಹಾಗೂ ವೈದ್ಯರ ದಿನದ ಅಂಗವಾಗಿ ಮಕ್ಕಳ ವಿಭಾಗ ಕುಮಾರ ಕಲ್ಪ-ದಿಂದ ಮಕ್ಕಳಲ್ಲಿ ಕಂಡುಬರುವ ಉಸಿರಾಟ ಸಂಬಂಧಿ ರೋಗಗಳು, ಕೆಮ್ಮು, ಶೀತ ಅಸ್ತಮಾ, ನೆಗಡಿ, ಅಲರ್ಜಿ ಸೈನುಸೈಟಿಸ್, ಗಂಟಲು ನೋವು ಮುಂತಾದ ತೊಂದರೆಗಳಿಗೆ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಜು.1 ರಿಂದ ಜು.7 ರವರೆಗೆ ಬೆಳಿಗ್ಗೆ 09.00 ರಿಂದ ಅಪರಾಹ್ನ 4.00 ರವರೆಗೆ ಆಯೋಜಿಸಲಾಗಿದೆ. ಈ ಶಿಬಿರವನ್ನು ಜು.1 ರಂದು ಮುನಿಯಾಲ್ ಆಯುರ್ವೇದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ, ಆಡಳಿತಾಧಿಕಾರಿಯಾದ ಶ್ರೀ ಯೋಗೀಶ್ ಶೆಟ್ಟಿ, ಮಕ್ಕಳ ತಜ್ಞರಾದ ಡಾ.ನಿವೇದಿತಾ, ಡಾ.ಸೌಮ್ಯ, ಡಾ.ರವಿಶಂಕರ್ ಶೆಣೈ (ಮುಖ್ಯಸ್ಥರು, ರೋಗನಿದಾನ ವಿಭಾಗ), ಮತ್ತು ಶಿಬಿರದ ಮೇಲ್ವಿಚಾರಕಿ ಡಾ.ಪ್ರೀತಿ ಪಾಟೀಲ್ ಹಾಗೂ ಆಸ್ಪತ್ರೆಯ ಮೇಲ್ವಿಚಾರಕರಾದ ಡಾ.ಪ್ರಮೋದ್ ಶೇಟ್ ಇವರು ದೀಪ ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ಸಂಸ್ಥೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಉಚಿತ ತಪಾಸಣಾ ಮತ್ತು ಔಷಧ ಚಿಕಿತ್ಸೆಯು ಲಭ್ಯವಿದ್ದು ಇನ್ನಿತರ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8123403233