ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪಂಕ್ತಿಭೇದ: ಭಕ್ತರ ಆಕ್ರೋಶ

ಕಾರ್ಕಳ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ರಥೋತ್ಸವ, ಜಾತ್ರಾಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಪಂಕ್ತಿಭೇದ ಮಾಡಿದೆ ಘಟನೆ ನಡೆದಿದ್ದು, ಇದಕ್ಕೆ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಸಮುದಾಯದವರಿಗೆ ಪ್ರತ್ಯೇಕ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ್ರಾಹ್ಮಣ ಸಮುದಾಯದವರಿಗೆ ದೇವಳದ ಅಂಗಣದಲ್ಲಿ ವ್ಯವಸ್ಥೆ ಮಾಡಿದ್ದರೆ, ಗಣ್ಯ ವ್ಯಕ್ತಿಗಳಿಗೆ ಸಭಾಂಗಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೆ ಇತರರಿಗೆ ಹಿಂದುಳಿದ ಸಮಾಜದವರಿಗೆ ದೇವಸ್ಥಾನದ ಹಿಂಭಾಗದ ಗದ್ದೆಯಲ್ಲಿ ಛತ್ರದಲ್ಲಿ ಊಟ ಬಡಿಸಲಾಗಿತ್ತು ಎಂದು ಭಕ್ತರು ಆರೋಪಿಸಿದ್ದಾರೆ.