ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದಲ್ಲಿ ಕಿಟಕಿ ಬಾಗಿಲು ಒಡೆದು ಹಣ ಕಳವು ಗೈದ ಘಟನೆ ನಡೆದಿದೆ.
ಮುಂಡ್ಕೂರು ಗ್ರಾಮದ ಪೊಸ್ರಾಲ್ ಮುಲ್ಲಗುಡ್ಡೆ ಎಂಬಲ್ಲಿ ಫೆ.15 ರಂದು ಕಿಟಕಿ ಒಡೆದು ಹಿಂದಿನ ಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿರಿಸಿದ್ದ 35 ಸಾವಿರ ರೂಪಾಯಿ ನಗದನ್ನು ಕಳ್ಳರು ದೋಚಿದ್ದಾರೆ ಎಂದು ಶ್ರೀಧರ್ ಸನಿಲ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.