ಮುಂಡ್ಕೂರಿನಲ್ಲಿ ಅಡಿಕೆ ಕಳವು ಪ್ರಕರಣ: 12 ಮಂದಿ ಅಪ್ರಾಪ್ತ ಬಾಲಕರ ಬಂಧನ.

ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಂಡ್ಯೂರಿನಲ್ಲಿ ಕಳೆದ ತಿಂಗಳು ನಡೆದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ 12 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆ.23ರಂದು ಮುಂಡೂರು ತೋಟದ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸೆ.8ರಂದು 12 ಮಂದಿ ಬಾಲಕರನ್ನು ಬಂಧಿಸಿ, 5ಲಕ್ಷ ರೂ. ಮೌಲ್ಯದ 1100 ಕೆಜಿ ಅಡಿಕೆಯನ್ನು ವಶ ಪಡಿಸಿಕೊಂಡಿದ್ದಾರೆ.

ಕಾರ್ಕಳ ವೃತ್ತ ನೀರಿಕ್ಷಕ ಮಂಜಪ್ಪ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಎಸ್ಸೆಗಳಾದ ಪ್ರಸನ್ನ ಎಂ.ಎಸ್‌., ಸುಂದರ ಮತ್ತು ಎಎಸ್ಸೆಗಳಾದ ಪ್ರಕಾಶ್, ಸುಂದರ ಗೌಡ ಮತ್ತು ಸಿಬ್ಬಂದಿಗಳಾದ ರುದ್ರೇಶ್, ಚಂದ್ರಶೇಖರ, ಮಹಾಂತೇಶ್‌ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ದಿನೇಶ್, ನಿತಿನ್ ಈ ಕಾರ್ಯಾಚರಣೆ ನಡೆಸಿದ್ದಾರೆ.