ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್, ಇತ್ತೀಚೆಗೆ ಮಂಗಳೂರಿನ ದಿ ಓಷನ್ ಪರ್ಲ್ ನಲ್ಲಿ “ಇವಿನಿಂಗ್ ಆಫ್ ಗ್ಯಾಟಿಟ್ಯೂಡ್ 2026” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಚಾನೆಲ್ ಪಾರ್ಟ್ನ‌್ರಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತಂದ ಈ ಕಾರ್ಯಕ್ರಮವು ಸಹಭಾಗಿತ್ವದ ಮೌಲ್ಯ, ಸಾಮಾಜಿಕ ಬದ್ಧತೆ ಹಾಗೂ ಮಂಗಳೂರಿನ ಭವಿಷ್ಯದ ಬೆಳವಣಿಗೆಯ ಕುರಿತ ಸಮಗ್ರ ದೃಷ್ಟಿಕೋನವನ್ನು ಅನಾವರಣಗೊಳಿಸಿತು.
ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವಾನ್ ಡಿಸೋಜ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ ಮತ್ತು ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೇರೊ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅತ್ಯಂತ ಅರ್ಥಪೂರ್ಣ ಕ್ಷಣವಾಗಿ, ರೋಹನ್ ಕಾರ್ಪೊರೇಷನ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವನ್ನು ನೀಡಲು ಮುಂದಾಯಿತು. ಇದರ ಭಾಗವಾಗಿ ಮಲ್ಟಿ ಪ್ಯಾರಾ ಮಾನಿಟರ್‌ಗಳು ಹಾಗೂ ನೇತ್ರ ಚಿಕಿತ್ಸೆಗೆ ಅಗತ್ಯವಾದ ಆಫ್ತಾಲ್ಮೀಕ್ ಹೊರರೋಗಿ ವಿಭಾಗ ಘಟಕವನ್ನು ಹಸ್ತಾಂತರಿಸಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ಕೆ ಕೈಜೋಡಿಸಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಐವಾನ್ ಡಿಸೋಜಾ, “ಒಮ್ಮೆ ಶಾಂತ ಕರಾವಳಿ ನಗರವಾಗಿ ಗುರುತಿಸಿಕೊಂಡಿದ್ದ ಮಂಗಳೂರು ಇಂದು ಅವಕಾಶಗಳ, ಅಭಿವೃದ್ಧಿಯ ಮತ್ತು ಮಹತ್ವಾಕಾಂಕ್ಷೆಗಳ ನಗರವಾಗಿ ಹೊಸ ಹೆಜ್ಜೆ ಇಡುತ್ತಿದೆ. ಈ ಪರಿವರ್ತನೆಯನ್ನು ರೂಪಿಸುವಲ್ಲಿ ರೋಹನ್ ಕಾರ್ಪೊರೇಶನ್‌ನಂತಹ ಜವಾಬ್ದಾರಿಯುತ ಡೆವಲಪರ್‌ಗಳ ಪಾತ್ರ ನಿಜವಾಗಿಯೂ ಶ್ಲಾಘನೀಯ,” ಎಂದರು.
ರೋಹನ್ ಕಾರ್ಪೊರೇಷನ್ ನ ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೇರೊ ಅವರು, ಐಟಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು(GCC) ಹಾಗೂ ಜಾಗತಿಕ ಕೇಂದ್ರ ಕಚೇರಿಗಳನ್ನು ಮಂಗಳೂರಿಗೆ ಕರೆತಂದು, ನಗರವನ್ನು ಬೆಳವಣಿಗೆ, ಹೂಡಿಕೆ ಮತ್ತು ಅವಕಾಶಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಸಂಸ್ಥೆಯ ಆಶಯವನ್ನು ಹಂಚಿಕೊಂಡರು. “ಮಂಗಳೂರಿಗೆ ಭಾರತದ ಅತ್ಯಂತ ಮಹತ್ವದ ಉದಯೋನ್ಮುಖ ನಗರಗಳಲ್ಲಿ ಒಂದಾಗಲು ಬೇಕಾದ ಪ್ರತಿಭೆ, ಗುಣಮಟ್ಟದ ಜೀವನಶೈಲಿ ಮತ್ತು ಸಂಪರ್ಕ ವ್ಯವಸ್ಥೆಯಿದೆ,” ಎಂದು ಅವರು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ ಅವರು ಸಮಾಜಕ್ಕೆ ಮರಳಿ ಕೊಡುವ ಮನೋಭಾವದ ಕುರಿತು ಮಾತನಾಡುತ್ತಾ, “ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಎಸ್‌ಆರ್ ಯೋಜನೆಗಳು, ಸಮಾಜಮುಖಿ ಕಾರ್ಯಗಳು ಮತ್ತು ಅರ್ಥಪೂರ್ಣ ಕೊಡುಗೆಗಳ ಮೂಲಕ ಮಂಗಳೂರಿನ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ,” ಎಂದು ಹೇಳಿದರು.
ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ವೆನಾಕ್ ಆಸ್ಪತ್ರೆಗೆ ನೀಡಲಾದ ಆಧುನಿಕ ವೈದ್ಯಕೀಯ ಉಪಕರಣಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವಾರು ರೋಗಿಗಳಿಗೆ ತುಂಬ ಸಹಕಾರಿಯಾಗಲಿವೆ ಎಂದು ಹೇಳಿದರು. ಈ ಮಹತ್ಕಾರ್ಯಕ್ಕಾಗಿ ಪರವಾಗಿ ರೋಹನ್ ಕಾರ್ಪೊರೇಷನ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಂಗಳೂರಿನ ಬೆಳೆಯುತ್ತಿರುವ ಸ್ಥಾನ”ಎಂಬ ವಿಷಯದ ಮೇಲೆ ಉನ್ನತ ಮಟ್ಟದ ಸಂವಾದ ಗೋಷ್ಠಿ ನಡೆಯಿತು. ಈ ಸಂವಾದದಲ್ಲಿ ದೇಶದ ಅತ್ಯಂತ ಹೆಸರಾಂತ ಉದ್ಯಮ ತಜ್ಞರಾದ ಅಂಕುಶ್ ಸಯಲ್, ದೀಪ್ತಿ ಮಲಿಕ್, ಹೇಮ್ ಬಾತ್ರಾ ಮತ್ತು ನವದೀಪ್ ಸಿಂಗ್ ಖನುಜಾ ಭಾಗವಹಿಸಿದ್ದರು. ಅವರು ರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಭಾರತದ ರಿಯಲ್ ಎಸ್ಟೇಟ್ ನಕ್ಷೆಯಲ್ಲಿ ಮಂಗಳೂರಿನ ಬೆಳೆಯುತ್ತಿರುವ ಸ್ಥಾನವನ್ನು ವಿಶ್ಲೇಷಿಸಿದರು.
ಮುಖ್ಯ ಅತಿಥಿ ಮತ್ತು ಸಂವಾದದಲ್ಲಿ ಭಾಗವಹಿಸಿದವರಿಗೆ ಕೃತಜ್ಞತಾಪೂರ್ವಕ ಗೌರವ ಸ್ಮರಣಿಕೆಗಳನ್ನು ನೀಡಿ, ನಂತರ ನೆಟ್‌ವರ್ಕಿಂಗ್ ಮತ್ತು ಭೋಜನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.

















