ಪುತ್ತೂರು: ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕರಾದ ಮುಳಿಯ ಸಾರಾಫ ಶ್ಯಾಮ ಭಟ್ (81 ವರ್ಷ) ಅವರು ಅಕ್ಟೋಬರ್ 4ರಂದು ನಿಧನ ಹೊಂದಿದ್ದಾರೆ.
ಪುತ್ತೂರಿನ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನಾ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು.
ಚಿನ್ನಾಭರಣ, ಬೆಳ್ಳಿ ಮತ್ತು ವಜ್ರ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮುಳಿಯ ಶ್ಯಾಮ ಭಟ್ ಅವರು ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರು ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಶೋರೂಮ್ ಹೊಂದಿ ರಾಜ್ಯದ್ಯಾಂತ ಶೋ ರೂಮ್ ಹೊಂದಿದ್ದಾರೆ.















