ಉಡುಪಿ: ಭಾನುವಾರದಂದು ಕುರ್ಕಾಲ್‌ನಲ್ಲಿ ಕೆನ್ – ಈ – ಮಾಬುನಿ – ಶೀಟೋ – ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ನಡೆದ ಪ್ರಥಮ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಕಾಂಪೀಟ್-3.0ನಲ್ಲಿ ಮುಕುಂದಾ ಕೃಪಾ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಅಚಲಾ ಕುಮಿಟೆಯಲ್ಲಿ ಮೊದಲನೆ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಕಟಾ ದಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ ಮತ್ತು ಕುಮಿಟೆಯಲ್ಲಿ 7 ನೇ ತರಗತಿ ವಿದ್ಯಾರ್ಥಿನಿ ಕಾಮಾಕ್ಷಿ 2ನೇ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಮುಕುಂದ ಕೃಪಾ ಶಾಲೆಯ ಮುಖ್ಯೋಪಾಧ್ಯಯಿನಿ ಸುಜಾತಾ ಶೆಟ್ಟಿ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.