ದಲಿತೆ ಎಂದು ಪೋಲಿಸ್‌ ಪೇದೆಯನ್ನೇ ದೇವಸ್ಥಾನದಿಂದ ಹೊರ ಹಾಕಿದ ಅರ್ಚಕರು..

ಮಂಗಳೂರು: ದಲಿತ ಮಹಿಳೆ ಎಂಬ ಕಾರಣದಿಂದ ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ದೇವಸ್ಥಾನದಿಂದ ಹೊರಹಾಕಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಘಟನೆ ನಡೆದಿದೆ.
ಸೋಮವಾರ ಷಷ್ಠಿ ಮಹೋತ್ಸವ ಈ ದೇವಸ್ಥಾನದಲ್ಲಿ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸುತ್ತಿದ್ದರಿಂದ ಪೊಲೀಸ್ ಇಲಾಖೆ ದೇವಸ್ಥಾನಕ್ಕೆ ಭದ್ರತೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಮಹಿಳಾ ಪೊಲೀಸ್ ಪೇದೆಯು ಅಲ್ಲಿ ಕಾರ್ಯನಿರತರಾಗಿದ್ದರು. ಹೀಗಾಗಿ ಮಹಿಳಾ ಪೇದೆ ದಲಿತೆ ಎಂಬ ಕಾರಣಕ್ಕೆ ಅಲ್ಲಿನ ದೇವಸ್ಥಾನ ಅರ್ಚಕ ಮಂಡಳಿಯವರು ಕೂಡಲೇ ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ನಿಮ್ಮನ್ನು ಯಾರು ಈ ದೇವಸ್ಥಾನದ ಒಳಗೆ ಬಿಟ್ಟುಕೊಂಡಿದ್ದು ? ನೀವು ದೇವಸ್ಥಾನದ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಕಾರ್ಯನಿರ್ವಹಿಸಿ, ನೀವು ಒಳಗೆ ಬಂದಿದ್ದರಿಂದ ದೇವಸ್ಥಾನ ಮೈಲಿಗೆಯಾಗಿದೆ ಎಂದು ಅವಮಾನ ಮಾಡಿ ದೇವಸ್ಥಾನದಿಂಧ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಪೊಲೀಸ್ ಮಹಿಳಾ ಪೇದೆಯನ್ನು ಹೊರಹಾಕಿದ್ದನ್ನು ಪ್ರಶ್ನಿಸಿದ್ದು ಆದರೂ ಅರ್ಚಕ ಸಿಬ್ಬಂದಿಯವರನ್ನು ಹೊರ ಕಳುಹಿಸಿದ್ದಾರೆ. ಭೋಜನ ಸ್ಥಳದಲ್ಲೂ ತಾರತಮ್ಯ ಮಾಡಿದ್ದು ಎಲ್ಲರ ಸಿಟ್ಟಿಗೆ ಕಾರಣವಾಗಿದೆ