ಮೂಡಬಿದಿರೆ ಆಳ್ವಾಸ್ ಪಿಯು ಕಾಲೇಜಿಗೆ ಶೇ.99.06 ಫಲಿತಾಂಶ: ಟಾಪ್ ಟೆನ್ ನಲ್ಲಿ ಆಳ್ವಾಸ್ ನ 21 ವಿದ್ಯಾರ್ಥಿಗಳು

ಮೂಡುಬಿದಿರೆ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ 2779 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 2753 ಮಂದಿ ಉತ್ತೀರ್ಣರಾಗಿ ಶೇ.99.06 ಫಲಿತಾಂಶ ಲಭಿಸಿದೆ.
ರಾಜ್ಯದ ಟಾಪ್ 10 ಸ್ಥಾನದಲ್ಲಿ ಆಳ್ವಾಸ್ 21 ಮಂದಿ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನರ್ಘ್ಯ(592), ರಘುವೀರ್ ಮಠದ್(592), ಲಿಶನ್(592) ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅನಿಲ್ ಬನ್ನಿ ಶೆಟ್ಟಿ(589), ಬಗೇಶ್ ಕೊಡಗನೂರು(588) ವಿನಾಯಕ ಗ್ಯಾನಪ್ಪ ಗಡ್ಡಿ(588), ಸುವೀಕ್ಷ್ ಹೆಗ್ಡೆ(588), ಮಹೇಶ್ವರಿ(588), ಸ್ವಾತಿ ಬಿ. ಮಳಿಮಠ್(587), ಪಿ.ಎಸ್. ರವೀಂದ್ರ(587), ಧನ್ಯ ಕೆ. ಎನ್.(587) ಅಂಕ ಪಡೆದಿದ್ದಾರೆ.
ಕಾಮರ್ಸ್ ವಿಭಾಗದಲ್ಲಿ ಹರ್ಷ ಜೆ ಆಚಾರ್ಯ(593) ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಈಶ್ವರ್ ವಿಜಯ ಸ್ವಾಮಿ ಎಲಿಗಾರ್(591),  ಶ್ರೇಯ ಕೆ.ಬಿ.(591), ಪ್ರತೀತ(590), ರಿಹಾಲ್ ಅಯ್ಯಪ್ಪ(590), ಸಮರ್ಥ್(589), ಭಾರ್ಗವಿ(589), ಚಂದನ ಡಿ. ಹೆಗ್ಡೆ(589), ಪ್ರಿಯಾಂಕ ಜಿ. ಧನ್ಯ(589), ಐಶ್ವರ್ಯ ಎಂ.(580) ಅಂಕ ಗಳಿಸಿದ್ದಾರೆ.