ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದ ಸಮಯದಲ್ಲಿ ಭಾರತವು ಎಲ್ಲಾ ಐಸಿಸಿ ಪಂದ್ಯಾವಳಿಗಳನ್ನು ಗೆದ್ದಿದೆ. ಕ್ರಿಕೆಟ್ ಜೊತೆಗೆ ಅವರ ಫುಟ್ಬಾಲ್ ಪ್ರತಿಭೆಯನ್ನು ಅಭಿಮಾನಿಗಳು ನೋಡಿದ್ದಾರೆ. ನವೆಂಬರ್ 14 ರಂದು, ಸ್ಥಳೀಯ ಟೆನಿಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಧೋನಿ ಮತ್ತೊಂದು ಗರಿಯನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ)ಯು ಟೆನಿಸ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಿದ್ದು, ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಎಂಎಸ್ ಧೋನಿ ಗೆದ್ದಿದ್ದಾರೆ.
. @msdhoni won the Men's double Trophy.😇❤️ pic.twitter.com/thEVoJBxeM
— DIPTI MSDIAN (@Diptiranjan_7) November 14, 2022
ಟ್ರೋಫಿ ಗೆಲ್ಲಲು ಸ್ಥಳೀಯ ಟೆನಿಸ್ ಆಟಗಾರ ಸುಮೀತ್ ಕುಮಾರ್ ಬಜಾಜ್ ಅವರೊಂದಿಗೆ ಧೋನಿ ಜೊತೆಯಾಟ ಆಡಿದ್ದಾರೆ. ಧೋನಿ ಮತ್ತು ಬಜಾಜ್ ತಮ್ಮ ಟ್ರೋಫಿಗಳನ್ನು ಪಡೆಯುತ್ತಿರುವ ವೀಡಿಯೊವನ್ನು ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಧೋನಿ ಐಪಿಎಲ್ 2023 ರಲ್ಲಿ ಚೆನ್ನೈ ಸುಪರ್ ಕಿಂಗ್ಸ್ ತಂಡವನ್ನು ಮತ್ತೊಮ್ಮೆ ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.












