ದುಬೈನಲ್ಲಿ ಮಿಸ್ಟರ್ ಕ್ರಿಕೆಟ್ ರಾಹುಲ ದ್ರಾವಿಡ್ ಕಪ್ ಕ್ರಿಕೆಟ್ ಪಂದ್ಯಾಟವು ಜೂನ್ ಒಂದರಿಂದ ಆರಂಭವಾಗಲಿದೆ.
ಗ್ರೇಟ್ ವಾಲ್ ಆಫ್ ಕ್ರಿಕೆಟ್ ಎಂದು ಪ್ರಸಿದ್ಧರಾಗಿರುವ ರಾಹುಲ್ ದ್ರಾವಿಡ್ ಹೆಸರಿನಲ್ಲಿ ಅವರ ಮಹಾನ್ ಅಭಿಮಾನಿಯಾದ ದುಬೈನ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡದ ನಾಯಕ ಶ್ರೀವಿಠಲ ರೀಶಾನ್ ನಾಯಕ್ ಈ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ.
ಕುಂದಾಪುರ ಸಮೀಪದ ಸೂರಾಲು ಮೂಲದ ಸದ್ಯ ದುಬೈನಲ್ಲಿ ನೆಲೆಸಿರುವ ವಿಠಲರಿಶಾನ್ ನಾಯಕರ ನ್ನೇತೃತ್ವದಲ್ಲಿ ಜರುಗಲಿರುವ ಈ ಪಂದ್ಯಾಟವು ಜೂನ್ ಒಂದರಿಂದ ಜುಲೈ 20ರ ವರೆಗೆ ಪ್ರತಿ ಭಾನುವಾರ ಜರಗಲಿದೆ.15 ಓವರಿನ ಈ ಪಂದ್ಯಾಟದಲ್ಲಿ ದುಬೈನ ಪ್ರಸಿದ್ಧ 16ತಂಡಗಳು ಪಾಲ್ಗೊಳ್ಳುತ್ತಿವೆ.ಜುಲೈ 20 ಭಾನುವಾರ ದುಬೈನ ಅಜಮಾನ್ ಗ್ರಾಸ್ ಗ್ರೌಂಡ್ ನಲ್ಲಿ ಫೈನಲ್ ಪಂದ್ಯಾಟ ನೆರವೇರಲಿದೆ.ವಿಜೇತರಿಗೆ 2777aed ನಗದು ಬಹುಮಾನ ದ್ವಿತೀಯ ಸ್ಥಾನ ವಿಜೇತರಿಗೆ1777 aed ನಗದು ಜೊತೆಗೆ ಆಕರ್ಷಕ ಸ್ಮರಣಿಕೆ ಪ್ರಮಾಣ ಪತ್ರಗಳೂ ಲಭಿಸಲಿವೆ.ದುಬೈನ ಟೆಕ್ನೋಟೈಟಾನ್ಸ್ ಕ್ರಿಕೆಟ್ ತಂಡದ ನಾಯಕರಾದ ಶ್ರೀವಿಠಲ ರಿಷಾನ್ ನಾಯಕ್ ಸಾರಥ್ಯದಲ್ಲಿ ಈ ಪಂದ್ಯಾವಳಿ ಜರಗುತ್ತಿದೆ.
ಕೇರಳ,ಬಿಹಾರ್,ಮುಂಬೈ,ಕೊಲ್ಕತ್ತಾ,ತಮಿಳುನಾಡು,ರಾಜಸ್ತಾನ,ಸೇರಿದಂತೆ ಉಡುಪಿ ಮಂಗಳೂರು ಕುಂದಾಪುರ ಕರಾವಳಿಯ ಬಹುತೇಕ ಪ್ರಸಿದ್ಧ ಆಟಗಾರರು ಪಾಲ್ಗೊಳ್ಳುತ್ತಿರುವ ಈ ಪಂದ್ಯಾಟವು ಸಂಯುಕ್ತ ಅರಬ್ ರಾಷ್ಟ್ರದ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.












