ಗಣೇಶ ಚತುರ್ಥಿಯಂದೇ ಹೊಸ ಸಂಸತ್ ಭವನದೊಳಗೆ ಪ್ರವೇಶ: ಪ್ರಧಾನಿ ಮೋದಿ

ನವದೆಹಲಿ: ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್ತಿಗೆ ತೆರಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಣಪತಿಯನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ, ಈಗ ದೇಶದ ಅಭಿವೃದ್ಧಿಗೆ ಯಾವುದೇ ಅಡೆತಡೆಗಳಿಲ್ಲ ನಿರ್ವಿಘ್ನ ರೂಪದಿಂದ ಭಾರತವು ತನ್ನ ಎಲ್ಲಾ ಕನಸು ಎಲ್ಲ ಸಂಕಲ್ಪಗಳನ್ನು ಪರಿಪೂರ್ಣಗೊಳಿಸಲಿದೆ. ಗಣೇಶ್ ಚತುರ್ಥಿಯ ದಿನದಂದು ನವ ಪಯಣ ಹೊಸ ಭಾರತ ಎಲ್ಲಾ ಕನಸುಗಳನ್ನು ಚರಿತಾರ್ಥಗೊಳಿಸಲಿದೆ. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಬಹಳ ಪ್ರಮುಖವಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು.