ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್: ಫ್ರಾಂಚೈಸಿಗಳು ಖರೀದಿಸಿದ ಆಟಗಾರರ ಪಟ್ಟಿ ಹೀಗಿದೆ?

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14ನೇ ಆವೃತ್ತಿಗಾಗಿ ಆಟಗಾರರ ಹರಾಜು (ಐಪಿಎಲ್ 2021 ಹರಾಜು) ಇಂದು ನಡೆಯುತ್ತಿದ್ದು, ಒಟ್ಟು 291 ಕ್ರಿಕೆಟಿಗರ ಬಿಡ್ಡಿಂಗ್ ನಡೆಯಲಿದೆ

14. 25 ಕೋಟಿಗೆ ಮ್ಯಾಕ್ಸ್​ವೆಲ್ ಆರ್​ಸಿಬಿ ಪಾಲಾಗಿದ್ದಾರೆ. ಆರಂಭದಿಂದಲೂ ಚೆನ್ನೈ ಮತ್ತು ಬೆಂಗಳೂರು ನಡುವೆ ಭಾರಿ ಪೈಫೋಟಿ ಉಂಟಾಗಿತ್ತು. ಅಂತಿಮವಾಗಿ ಮ್ಯಾಕ್ಸ್​ವೆಲ್, ಆರ್​ಸಿಬಿ ಸೇರಿದರು. ಹಾಗೆಯೇ 16.25 ಕೋಟಿಗೆ ದಕ್ಷಿಣ ಆಫ್ರಿಕಾದ ಆಟಗಾರ ಕ್ರಿಸ್​ ಮೋರಿಸ್​ ರಾಜಸ್ಥಾನ್​ ರಾಯಲ್ಸ್​ ಪಾಲಾಗಿದ್ದಾರೆ. ಮೋರಿಸ್​ಗಾಗಿ ಪಂಜಾಬ್​ ಮತ್ತು ರಾಜಸ್ಥಾನ್​ ನಡುವೆ ಬಾರಿ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ಮೋರಿಸ್​ ರಾಜಸ್ಥಾನ್​ ಸೇರಿದರು. ​

ಕಳೆದ ಆವೃತ್ತಿಯಲ್ಲಿ ಪಂಜಾಬ್​ ತಂಡದಲ್ಲಿ ಆಡಿದ್ದ ಜಗದೀಶನ್​ ಸುಚಿತ್​, 30 ಲಕ್ಷ ರೂಗಳಿಗೆ ಹೈದ್ರಾಬಾದ್​ ತಂಡಕ್ಕೆ ಮಾರಾಟವಾಗಿದ್ದಾರೆ.
ಆಸ್ಟ್ರೇಲಿಯಾದ ಆಟಗಾರ ರಿಲೇ ಮೆರೆಡಿತ್​ ಬರೋಬ್ಬರಿ 8 ಕೋಟಿ ರೂಗಳಿಗೆ ಪಂಜಾಬ್​ ತಂಡ ಸೇರಿದ್ದಾರೆ. ದೇಶಿ ಪ್ರತಿಭೆ ಚೇತನ್​ ಸಕಾರಿಯ 1.20 ಕೋಟಿಗೆ ರಾಜಸ್ಥಾನ್​ ತಂಡದ ಪಾಲಾಗಿದ್ದಾರೆ. ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ್ದ ಮೊಹಮ್ಮದ್​ ಅಜಾರುದ್ದೀನ್​ 20 ಲಕ್ಷ ಮೂಲ ಬೆಲೆಗೆ ಆರ್​ಸಿಬಿ ತಂಡದ ಪಾಲಾಗಿದ್ದಾರೆ.

ಕನ್ನಡಿಗ ಕೆ. ಗೌತಮ್​ 9.25 ಕೋಟಿ ರೂಗಳಿಗೆ ಚೆನ್ನೈ ತಂಡದ ಪಾಲಾಗಿದ್ದಾರೆ. 5.25 ಕೋಟಿ ರೂಗಳಿಗೆ ದೇಶಿ ಪ್ರತಿಭೆ ಶಾರೂಖ್​ ಖಾನ್​, ಪಂಜಾಬ್​ ಪಾಲಾಗಿದ್ದಾರೆ.
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್​ ಪಿಯೂಷ್​ ಚಾವ್ಲಾ 2.4 ಕೋಟಿಗೆ ಮುಂಬೈ ಪಾಲಾಗಿದ್ದಾರೆ. ಆರ್​ಸಿಬಿ ತಂಡದ ಮಾಜಿ ಆಟಗಾರ ಸಚಿನ್​ ಬೇಬಿ 20 ಲಕ್ಷ ಮೂಲ ಬೆಲೆಗೆ ಮತ್ತೊಮ್ಮೆ ಆರ್​ಸಿಬಿ ತಂಡದ ಪಾಲಾಗಿದ್ದಾರೆ.

ಡೆಲ್ಲಿ ಪಾಲಾದ ಉಮೇಶ್​ ಯಾದವ್​
ಟೀಂ ಇಂಡಿಯಾದ ವೇಗದ ಬೌಲರ್​ ಉಮೇಶ್​ ಯಾದವ್​ 1 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ. ಈ ಹಿಂದೆ ಉಮೇಶ್​ ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದರು. ಆಸ್ಟ್ರೇಲಿಯಾದ ವೇಗದ ಬೌಲರ್ ಕೋಲ್ಟರ್​ನೈಲ್ 5 ಕೋಟಿಗೆ​​ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ

ಆಸ್ಟ್ರೇಲಿಯಾದ ವೇಗದ ಬೌಲರ್​ ಜ್ಯಾಯ್​ ರಿರ್ಚಡ್​ಸನ್​ 14 ಕೋಟಿ ರೂಗಳಿಗೆ ಪಂಜಾಬ್​ ತಂಡದ ಪಾಲಾದರು. ಬಾಂಗ್ಲದೇಶ ತಂಡದ ವೇಗದ ಬೌಲರ್ ಮುಸ್ತಫೀಜೂರ್​ ರೆಹಮಾನ್ 1 ಕೋಟಿಗೆ ರಾಜಸ್ಥಾನ್​ ರಾಯಲ್ಸ್​ ಪಾಲಾಗಿದ್ದಾರೆ.​ 3.2 ಕೋಟಿಗೆ ನ್ಯೂಜಿಲ್ಯಾಂಡ್​ನ ವೇಗದ ಬೌಲರ್​ ಅಡಂ ಮಿಲ್ನೆ ಮುಂಬೈ ಪಾಲಾಗಿದ್ದಾರೆ.

ಅತ್ಯಂತ ದುಬಾರಿ ಆಟಗಾರ ಕ್ರಿಸ್ ಮೋರಿಸ್
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ. ನೀಡಿ ಕೊಂಡುಕೊಂಡಿದೆ.

1. 50 ಕೋಟಿ ರೂಗಳಿಗೆ ಇಂಗ್ಲೆಂಡ್​ ತಂಡದ ಆಟಗಾರ ಡೇವಿಡ್​ ಮಲನ್​ ಪಂಜಾಬ್​ ಪಾಲಾಗಿದ್ದಾರೆ. 4.40 ಕೋಟಿಗೆ ಶಿವಂ ದುಬೆ, ರಾಜಸ್ಥಾನ್ ರಾಯಲ್ಸ್​​ ಸೇರಿದ್ದಾರೆ. ಈ ಹಿಂದೆ ದುಬೆ ಆರ್​ಸಿಬಿ ತಂಡದಲ್ಲಿದ್ದರು.

ಬರೋಬ್ಬರಿ 7 ಕೋಟಿ ರೂಗಳಿಗೆ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಮೋಯಿನ್​ ಅಲಿ ಸಿಎಸ್​ಕೆ ಪಾಲಾಗಿದ್ದಾರೆ.3.20 ಕೋಟಿಗೆ ಬಾಂಗ್ಲದೇಶದ ಆಲ್​ರೌಂಡರ್​ ಶಕೀಬ್​ ಹಲ್​ ಹಸನ್​ ಕೆಕೆಆರ್​ ತಂಡದ ಪಾಲಾಗಿದ್ದಾರೆ. 2.20 ಕೋಟಿಗೆ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ