ಸೆ 26 ರಿಂದ ಅಕ್ಟೋಬರ್ 5 ರವರೆಗೆ ಪ್ರಪ್ರಥಮ ಉಚ್ಚಿಲ ದಸರಾ-2022: 100 ಕ್ಕೂ ಅಧಿಕ ಟ್ಯಾಬ್ಲೋ ಪ್ರದರ್ಶನ 

ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ವರ್ಷದಿಂದ ನವರಾತ್ರಿ ಉತ್ಸವ ಉಚ್ಚಿಲ ದಸರಾ -2022 ಅನ್ನು ಸೆ 26 ರಿಂದ ಅಕ್ಟೋಬರ್ 5 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು.

ಅಕ್ಟೋಬರ್ 5 ರಂದು 100 ಅಧಿಕ ಟ್ಯಾಬ್ಲೋ ಗಳ ಮೂಲಕ ಭವ್ಯವಾದ ನವದುರ್ಗೆ ಹಾಗು ಶಾರದಾ ಮೂರ್ತಿಗಳ ಶೋಭಾಯಾತ್ರೆ ಉಚ್ಚಿಲ-ಎರ್ಮಾಳ್-ಪಡುಬಿದ್ರಿ-ಹೆಜಮಾಡಿ-ಪಡುಬಿದ್ರಿ-ಎರ್ಮಾಳ್-ಉಚ್ಚಿಲ-ಮೂಳೂರು ಮೂಲಕ ಸಾಗಿ ಕಾಪು ಸಮುದ್ರದಲ್ಲಿ ಜಲ ಸ್ಥಮ್ಭನ ಮಾಡಲಾಗುವುದು.

ನವರಾತ್ರಿ ಉತ್ಸವದ ಸಮಯದಲ್ಲಿ ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಮನೆ/ವಾಣಿಜ್ಯ ಸಂಕೀರ್ಣ/ಕಚೇರಿ/ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ದಸರಾ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಾಗುವುದು. ಶೋಭಾಯಾತ್ರೆಯ ಮಾರ್ಗದ ಎಲ್ಲಾ ಕಟ್ಟಡ ಮನೆ ಅಂಗಡಿ ಮುಂಗಟ್ಟು ಗಳು ದೀಪ ಬೆಳಗಿ ಉಚ್ಚಿಲ ದಸರಾ ಉತ್ಸವಕ್ಕೆ ಸಹಕರಿಸಬೇಕಾಗಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಜಿತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.