ಮೂಡುಬಿದಿರೆ: ತುಮಕೂರಿನ ಭಾರತೀಯ ಮೆಡಿಕಲ್ ಅಸೋಸಿಯೇಷನ್, ತುಮಕೂರಿನ ಬ್ಯಾಡ್ಮಿಂಟನ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ 28ನೇ ಸೋಮಣ್ಣ ಸ್ಮಾರಕ ಶಟಲ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂಡುಬಿದಿರೆಯ ಡಾ.ವಿನಯ್ ಆಳ್ವ ಹಾಗೂ ಡಾ ಕಾರ್ತಿಕ್ ಆರ್ ಚಂದ್ರರ ಜೋಡಿ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಿತು.
ಈ ಜೋಡಿ ಫೈನಲ್ಸ್ನಲ್ಲಿ 21-18, 15-21, 21-10 ಸೆಟ್ಗಳ ಅಂತರದಲ್ಲಿ ಜಯಿಸಿ ಮೊದಲ ಸ್ಥಾನ ಪಡೆಯಿತು. ಕಳೆದ ಸಾಲಿನಲ್ಲಿ ಇದೇ ಜೋಡಿ ಬೆಂಗಳೂರಿನ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ವಿಜಯಶಾಲಿಯಾಗಿತ್ತು. ಡಾ ಕಾರ್ತಿಕ್ ಆರ್ ಚಂದ್ರ ಇವರು ಜಟ್ಟಿಪಳ್ಳದ ರಾಮಚಂದ್ರ ಪೆಲ್ತಡ್ಕ ಮತ್ತು ಬಿ ಜೆ ರಾಧಮಣಿ ದಂಪತಿಗಳ ಸುಪುತ್ರನಾಗಿದ್ದು, ಡಾ ವಿನಯ್ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವರ ಪುತ್ರರಾಗಿದ್ದಾರೆ.












