ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಈಗಾಗಲೇ ಐಟಿ, ಬ್ಯಾಂಕಿಂಗ್, ಇನ್ಶುರೇನ್ಸ್, ಏವಿಯೇಷನ್, ಟ್ರಾವೆಲ್-ಟೂರಿಸಮ್, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ, ಸಂದರ್ಶನ ಕಲೆಯೊಂದಿಗೆ ಪರಿಣಿತರಿಂದ ತರಬೇತಿ ನೀಡಿ, ನಂತರ ಉದ್ಯೋಗವಕಾಶವನ್ನೂ ಒದಗಿಸುತ್ತಿದೆ.
ಇದೀಗ ಸಂಸ್ಥೆಯು ಈ ಅವಕಾಶವನ್ನು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೂ ಒದಗಿಸುವ ದೃಷ್ಟಿಯಿಂದ ತಿಂಗಳಿನ ಎರಡನೇ ವಾರದ ಪ್ರತಿ ಶುಕ್ರವಾರದಂದು ಮಾಸಿಕ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ.
ಈ ಮೇಳದಲ್ಲಿ ಜಿಲ್ಲೆಯ, ರಾಜ್ಯದ ಹಾಗೂ ಇನ್ನಿತರ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಿ ಅಭ್ಯರ್ಥಿಗಳ ನೇರ ನೇಮಕಾತಿ ಅಥವಾ ಪ್ರಾಥಮಿಕ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ಉದ್ಯೋಗಾವಕಾಶ ಕಲ್ಪಿಸಲಿವೆ.
ಈ ಮೇಳದಲ್ಲಿ ಭಾಗವಹಿಸುವ ಮುನ್ನ ಅಭ್ಯರ್ಥಿಗಳು ಉನ್ನತಿ ಸಂಸ್ಥೆಯ ಆನ್ಲೈಲೈನ್ ಲಿಂಕ್
https://forms.gle/FzYxAHgsKFxUWy7K8
ಮೂಲಕ ನೋಂದಣಿ ಮಾಡಿಕೊಂಡು, ಮುಂಚಿತವಾಗಿ ತರಬೇತಿಯನ್ನೂ ಪಡೆದುಕೊಳ್ಳಬಹುದು ಹಾಗೂ ಮೇಳದಲ್ಲಿ ಭಾಗವಹಿಸಬಹುದು.
ಮುಂದಿನ ವರ್ಷ ಜನವರಿ 12 ರಿಂದ “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ವರ್ಷವಿಡೀ ಪ್ರತಿ ತಿಂಗಳು ಸಂಸ್ಥೆಯು ಇಂತಹ ಮೇಳಗಳನ್ನು ಆಯೋಜಿಸಲಿದೆ.