ಅಯೋಧ್ಯೆಯಲ್ಲೊಂದು ಸುಂದರ ಘಟನೆ: ರಾಮಲಲ್ಲಾನನ್ನು ನೋಡಲು ಬಂದರೇ ಸಾಕ್ಷಾತ್ ರಾಮನ ಬಂಟ ಹನುಮ?

ಅಯೋಧೆ: ಅಯೋಧ್ಯೆಯಲ್ಲೊಂದು ವಿಲಕ್ಷಣ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಜ.23 ರ ಸಂಜೆ ವೇಳೆಗೆ ಕೋತಿಯೊಂದು ರಾಮನ ವಿಗ್ರಹವಿದ್ದ (Ram Lalla) ಗರ್ಭಗುಡಿಯನ್ನು ಪ್ರವೇಶಿಸಿ ಆಶ್ಚರ್ಯ ಸೃಷ್ಟಿಸಿದೆ. ಆದರೆ ಅದಕ್ಕಿಂತಲೂ ವಿಚಿತ್ರವೆಂದರೆ ಕೋತಿ ಯಾರಿಗೂ ಯಾವುದೇ ಅಪಾಯ ಮಾಡದೆ ತಣ್ಣನೆ ಹೊರನಡೆದಿದೆ!

ಈ ಬಗ್ಗೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ ಮಾಹಿತಿ ಹಂಚಿಕೊಂಡಿದೆ.

ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಇಂದು ನಡೆದ ಸುಂದರ ಘಟನೆಯ ವಿವರಣೆ:

“ಇಂದು(ಜ.23) ಸಂಜೆ 5:50ರ ಸುಮಾರಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿ ಪ್ರವೇಶಿಸಿ ಉತ್ಸವ ಮೂರ್ತಿಯ ಬಳಿ ತಲುಪಿದೆ. ಇದನ್ನು ನೋಡಿದ ಹೊರಗೆ ಕಾವಲಿನಲ್ಲಿದ್ದ ಭದ್ರತಾ ಸಿಬ್ಬಂದಿ, ಕೋತಿಯು ಉತ್ಸವ ಮೂರ್ತಿಯನ್ನು ನೆಲಕ್ಕೆ ಬೀಳಿಸಬಹುದೆಂದು ಭಾವಿಸಿ ಕೋತಿಯತ್ತ ಓಡಿದರು.

ಆದರೆ ಪೊಲೀಸರು ಕೋತಿಯತ್ತ ಓಡಿದ ಕೂಡಲೇ ಕೋತಿ ಶಾಂತವಾಗಿ ಉತ್ತರ ದ್ವಾರದತ್ತ ಓಡಿತು. ಗೇಟ್ ಮುಚ್ಚಿದ್ದರಿಂದ ಪೂರ್ವ ದಿಕ್ಕಿಗೆ ತೆರಳಿ ಸಂದರ್ಶಕರ ಗುಂಪನ್ನು ದಾಟಿ ಯಾರಿಗೂ ತೊಂದರೆಯಾಗದಂತೆ ಪೂರ್ವ ದ್ವಾರದ ಮೂಲಕ ಹೊರ ಬಂತು”.

“ನಮ್ಮ ಪಾಲಿಗೆ ಹನುಮಂತ ಜೀ ಅವರೇ ರಾಮಲಾಲರನ್ನು ನೋಡಲು ಬಂದಂತೆ ಆಗಿದೆ ಎನ್ನುತ್ತಾರೆ ಭದ್ರತಾ ಸಿಬ್ಬಂದಿ” ಎಂದು ಟ್ರಸ್ಟ್ ಎಕ್ಸ್ ನಲ್ಲಿ ಬರೆದುಕೊಂಡಿದೆ.