ಮಾಂಕ್ ದಿ ಯಂಗ್ ಟೀಸರ್​ ಅನಾವರಣ

ಮೂರು ತಿಂಗಳಲ್ಲಿ ಸಿನಿಮಾ ತೆರೆಗೆ: ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ‌ ಮಾತನಾಡಿ, ‌ಮಾಂಕ್ ದಿ ಯಂಗ್, ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಇಂದು ಟೀಸರ್ ರಿಲೀಸ್​​ ಮಾಡಿದ್ದೇವೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಹೊಸಬರ ಮಾಂಕ್ ದಿ ಯಂಗ್ ಟೀಸರ್​​ ರಿಲೀಸ್​ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದೆ. ಬಣ್ಣದ ಲೋಕದಲ್ಲಿ ಹೊಸಬರ ಪ್ರಯತ್ನಕ್ಕೆ ವೀಕ್ಷಕರು, ಕನ್ನಡ ಸಿನಿ ಗಣ್ಯರ ಬೆಂಬಲ ಸಿಗುತ್ತಿದೆ. “ಮಾಂಕ್ ದಿ ಯಂಗ್” ಚಿತ್ರ ಹೊಸಬರ ಸಿನಿಮಾ ಆಗಿದ್ದು ಬಹುಭಾಷೆಗಳಲ್ಲಿ ಮೂಡಿ ಬರುತ್ತಿದೆ.

ಮಾಂಕ್ ದಿ ಯಂಗ್ ಟೀಸರ್: ಇದೀಗ ಈ ಮಾಂಕ್ ದಿ ಯಂಗ್ ಚಿತ್ರದ ಟೀಸರ್ ಅನಾವರಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಟ ಪ್ರಥಮ್ ಟೀಸರ್​ ರಿಲೀಸ್​ ಪ್ರೋಗ್ರಾಮ್​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು‌. ಚಿತ್ರತಂಡ ಸಮಾರಂಭದಲ್ಲಿ ಉಪಸ್ಥಿತಿ ಇತ್ತು.

ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ಅಂತಿಮ ಹಂತದಲ್ಲಿದೆ. ಮೂರು ತಿಂಗಳಲ್ಲಿ ನಮ್ಮ ಚಿತ್ರ ತೆರೆಗೆ ಕಾಣಲಿದೆ. ಸಿನಿಮಾ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನನ್ನ ಧನ್ಯವಾದ. ಪ್ರೇಕ್ಷಕರು ಕೊಟ್ಟ ಹಣಕ್ಕೆ (ಟಿಕೆಟ್) ಮೋಸವಾಗದಂತಹ ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದರು.

ಸರೋವರ್​ಗೆ ನಾಯಕಿಯಾಗಿ ಸೌಂದರ್ಯ ಗೌಡ ನಟಿಸಿದ್ದಾರೆ. ಚಿತ್ರಕ್ಕೆ ಸ್ವಾಮಿನಾಥನ್‌ ಹಿನ್ನೆಲೆ ಸಂಗೀತ ನೀಡಿದ್ದು, ಧನುಷ್ ಎಲ್ ಬೇದ್ರೆ ಅವರ ಸಂಕಲನ ಇದೆ. ಜಯೇಂದ್ರ ವಾಕ್ವಾಡಿ ವಿ ಎಫ್ ಎಕ್ಸ್ ವರ್ಕ್ ಮಾಡಿದ್ದಾರೆ. ವಿನಯ್ ಬಾಬು ರೆಡ್ಡಿ, ಗೋಪಿಚಂದ್, ಲಾಲ್ ಚಂದ್, ನಾಯಕ ನಟ‌ ಸರೋವರ್, ರಾಜೇಂದ್ರನ್ ಜೊತೆಗೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಟೀಸರ್​ನಿಂದ ಕುತೂಹಲ ಹುಟ್ಟಿಸಿರೋ ಮಾಂಕ್ ದಿ ಯಂಗ್‌ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ನಟನೆ ಜೊತೆಗೆ ನಿರ್ಮಾಣ: ಈ ಚಿತ್ರದ ನಿರ್ದೇಶಕರಾದ ಮಾಸ್ಚಿತ್ ಸೂರ್ಯ ಅವರು ಅಭಿನಯ ಮಾಡಿಸಲೆಂದು ನನ್ನನ್ನು ಕಥೆ ಹೇಳುವುದಕ್ಕೆ ಕರೆದಿದ್ದರು. ಕಥೆ ಬಹಳ ಚೆನ್ನಾಗಿತ್ತು. ಅಭಿನಯಕ್ಕೆ ಹೋದ ನಾನು ನಟ ಮಾತ್ರವಲ್ಲದೇ ನಿರ್ಮಾಪಕನಾದೆ. ನನ್ನೊಂದಿಗೆ ನನ್ನ ಸ್ನೇಹಿತರು ಸಹ ನಿರ್ಮಾಣಕ್ಕೆ ಜೊತೆಯಾದರು. ಇಂದು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸೆಪ್ಟೆಂಬರ್​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ನಾನು ಸೇರಿದಂತೆ ಐವರು ನಿರ್ಮಾಪಕರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ನಿರ್ಮಾಪಕರಲ್ಲೊಬ್ಬರಾದ ರಾಜೇಂದ್ರನ್ ತಿಳಿಸಿದರು.
ಅಭಿನಯದ ಜೊತೆಗೆ ‌ನಿರ್ಮಾಣ ಕೂಡ ಮಾಡಿರುವ ನಾಯಕ ನಟ ಸರೋವರ್ ಮಾತನಾಡಿ, ನಾವು ಸೀಮಿತವಾದ ಜೀವನ ನಡೆಸುತ್ತಿರುತ್ತೇವೆ. ಆದರೆ ಅದರಿಂದಾಚೆ ಬಂದು ನೋಡಿದಾಗ ಬೇರೆಯೇ ಜೀವನ ಇದೆ. ನಮ್ಮ ಚಿತ್ರ ಕೂಡ ಕೊಂಚ ಅದೇ ರೀತಿ ಇದೆ.

ಮಾಮೂಲಿ ಜಾನರ್​ಗಿಂತ ಕೊಂಚ ಭಿನ್ನವಾದ ಸಿನಿಮಾ ಎನ್ನಬಹುದು. ‌ನಾನು ಹಾಗೂ ಮಾಸ್ಚಿತ್ ಸೂರ್ಯ ಮೊದಲು ಸಣ್ಣ ಮಟ್ಟದಲ್ಲಿ ಈ ಚಿತ್ರ ಆರಂಭ ಮಾಡಿದೆವು. ಆನಂತರ ನಾಲ್ಕು ನಿರ್ಮಾಪಕರು ಜೊತೆಯಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ಈ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.