ಮೋದಿ ಸಂಪುಟದಲ್ಲಿ ಮೂವರಿಗೆ ಸ್ಥಾನ, ಸದಾನಂದ ಗೌಡ ,ಸುರೇಶ್‌ ಅಂಗಡಿ , ಪ್ರಹ್ಲಾದ್‌ ಜೋಷಿ ಸಂಪುಟಕ್ಕೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರಕಾರ ಗುರುವಾರ ಮೇ.೩೦ರಂದು ರಚನೆಯಾಗಲಿದ್ದು, ರಾಜ್ಯದ ಮೂವರಿಗೆ ಸಚಿವ ಸ್ಥಾನ ದೊರೆಯಲಿದೆ.
ರಾಷ್ಟ್ರಪತಿ ಭವನದಲ್ಲಿ ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆಯಲಿದೆ. ಹಾಗೆಯೇ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಹಾಗೂ‌ ಹುಬ್ಬಳ್ಳಿ -ಧಾರಾವಾಡ ಕ್ಷೇತ್ರದ ಸಂಸದ, 4 ನೇ ಬಾರಿ ಸಂಸದರಾಗಿ ಆಯ್ಕೆಯಾದ 56ರ ಹರೆಯದ ಪ್ರಹ್ಲಾದ್‌ ಜೋಷಿ ಅವರಿಗೂ ಸಚಿವ ಸ್ಥಾನ ದೊರೆಯಲಿದ್ದು, ಇವರಿಗೆ ದೆಹಲಿಯ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಅಮಿತ್ ಶಾ ಅವರಿಂದ ಕರೆ ಬಂದಿದೆ ಎಂದು‌ ತಿಳಿದು ಬಂದಿದೆ.
ಜತೆಗೆ ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.