ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀ ರಾಮಂದಿರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು.
ವಿಶ್ವದಾದ್ಯಂತ ಇಂದು ಶ್ರೀರಾಮನ ಘೋಷವಾಕ್ಯ ಕೇಳಿಬರುತ್ತಿದೆ. ಸರಯೂ ನದಿಯಲ್ಲಿ ತೀರದಲ್ಲಿ ಸುವರ್ಣ ಅಧ್ಯಾಯ ಆರಂಭವಾಗಿದೆ. ಭಾರತ ಇಂದು ದೇವರ ಸನ್ನಿಧಿಯಲ್ಲಿದೆ ಎಂದರು.
ತಮ್ಮ ಭಾಷಣದುದ್ದಕ್ಕೂ ಪ್ರಭು ಶ್ರೀರಾಮನ ಸಂದೇಶಗಳನ್ನು ಸಂಸ್ಕೃತದಲ್ಲಿ ಪಠಿಸಿದ ಪ್ರಧಾನಿ ಮೋದಿ, ಅಯೋಧ್ಯೆಯ ರಾಮಜನ್ಮಭೂಮಿ ಇವತ್ತು ಮುಕ್ತವಾಗಿದೆ. ಇಡೀ ದೇಶವೇ ಇಂದು ರೋಮಾಂಚನ ಗೊಂಡಿದೆ. ರಾಮಮಂದಿರ ತ್ಯಾಗ ಬಲಿದಾನದಿಂದ ಇಂದು ಎಲ್ಲರ ಕನಸು ನನಸಾಗಿದೆ. ರಾಮಮಂದಿರ ಹೋರಾಟದಲ್ಲಿ ಸಂಘರ್ಷವಿತ್ತು, ಸಂಕಲ್ಪವೂ ಇತ್ತು. ಅಖಂಡ ನಿಷ್ಠೆ, ರಾಮಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಇತ್ತು. ಅಸ್ತಿತ್ವ ಕಿತ್ತೊಗೆಯಲು ಯತ್ನಿಸಿದ್ರು, ಆದರೆ ಶ್ರೀರಾಮ ಎಲ್ಲರ ಮನಸ್ಸಿನಲ್ಲಿ ಇದ್ದಾನೆ ಎಂದರು.
ರಾಮಮಂದಿರ ನಮ್ಮ ಸಂಸ್ಕೃತಿಯ ಆಧುನಿಕ ಪ್ರತಿನಿಧಿ. ರಾಮಮಂದಿರ ನಮ್ಮ ರಾಷ್ಟ್ರೀಯ ಭಾವನೆಯ ಪ್ರತೀಕವಾಗಲಿದೆ. ರಾಮಮಂದಿರ ನಿರ್ಮಾಣ ರಾಷ್ಟ್ರ ವನ್ನು ಒಗ್ಗೂಡಿಸುವ ಪ್ರಕ್ರಿಯೆ. ರಾಮಮಂದಿರ ಕೋಟ್ಯಾಂತರ ಜನರ ಭಾವನೆಯ ಪ್ರತೀಕ. ಶ್ರೀರಾಮ ಮರ್ಯಾದಾ ಪುರುಷೋತ್ತಮ. ಯಾವುದೇ ಕೆಲಸದ ಪ್ರೇರಣೆಗೆ ರಾಮನತ್ತಾ ನೋಡುತ್ತೇವೆ.
ಸತ್ಯ, ಅಹಿಂಸೆ, ಬಲಿದಾನಕ್ಕೆ ನ್ಯಾಯಪ್ರಿಯವಾದ ಭಾರತದ ಉಡುಗೊರೆ.
ನಮ್ಮ ಸಂಸ್ಕೃತಿಯ ಆಧಾರ, ಹನುಮಾನ್ ಗುರುವಸಿಷ್ಠ, ಶಬರಿಯಿಂದ ವಿಶ್ವಾಸ ಸಂಪಾದಿಸಿದ್ರು. ಅವರು ಅಧ್ಭುತ ವ್ಯಕ್ತಿತ್ವ, ವೀರತೆ, ಸತ್ಯನಿಷ್ಠೆ, ಸದೃಢತೆ, ಧೈರ್ಯ ಯುಗದಿಂದ ಯುಗಕ್ಕೆ ಪ್ರೇರಣೆ ನೀಡುತ್ತಲೇ ಬಂದಿದೆ.
ರಾಮಮಂದಿರ ಸಮೃದ್ಧ ಭಾರತದ ದ್ಯೋತಕವಾಗಲಿದೆ. ಒಂದೊಂದು ಕಡೆ ಒಂದೊಂದು ಭಾಷೆಯಲ್ಲಿ ರಾಮಾಯಣ ಇದೆ. ಶ್ರೀರಾಮ ಸಾಮಾಜಿಕ ಸಾಮರಸ್ಯವನ್ನು ಆಧಾರ ಶಿಲೆಯನ್ನಾಗಿ ಮಾಡಿಕೊಂಡಿದ್ದರು. ಮುಸ್ಲಿಮರು ಹೆಚ್ಚಿರುವ ದೇಶಗಳಲ್ಲೂ ರಾಮಾಯಣವಿದೆ.
ರಾಮನ ಆದರ್ಶಗಳ ಸಂದೇಶಗಳನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವುದು ನಮ್ಮ ಯುವ ಪೀಳಿಗೆಯ ಕರ್ತವ್ಯ ಎಂದರು.