ಬಾರ್ಕೂರು ನೇಶನಲ್ ಐಟಿಐ ಸಂಸ್ಥೆಯಲ್ಲಿ ಸಂಚಾರಿ ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ

ಬ್ರಹ್ಮಾವರ: ಬಾರ್ಕೂರು ನೇಶನಲ್ ಐಟಿಐ ಸಂಸ್ಥೆಯಲ್ಲಿ ಜೂ.18 ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರಜತಾದ್ರಿ ಮಣಿಪಾಲ ಇವರಿಂದ ಸಂಚಾರಿ ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಸಿಬ್ಬಂದಿ ವರ್ಗದವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಉಡುಪಿ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯ ಸಲಹೆಗಾರ ದೀಕ್ಷಿತ್ ಇವರು ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ನಮ್ಮ ಸಂಸ್ಥೆಯ ವಿವಿದ ವಿಭಾಗದ ಒಟ್ಟು 87 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.