ಬ್ರಹ್ಮಾವರ: ತಾಲೂಕಿನ ಆರೂರು ಗ್ರಾಮದ ಸ.ನಂ 148/2ಬಿ ರಲ್ಲಿ 1 ಎಕರೆ ಜಮೀನು ಉಡುಪಿ ತಹಶೀಲ್ದಾರರ ಎಡಿಎಸ್/ಡಿ.ಸಿ.ಆರ್.ಸಿ.ಆರ್ ನಂಬ್ರ 168/1982-83 ರಂತೆ ಶ್ರೀಕೃಷ್ಣ ನಾಯಕ ಎಂಬವರ ಹೆಸರಿಗೆ ದರ್ಖಾಸ್ತು ಮಂಜೂರಾತಿಯಾಗಿ ಅವರ ಹೆಸರಿನಲ್ಲಿ ಪಹಣಿ ದಾಖಲಾಗಿದ್ದರೂ ಈ ಜಾಗವನ್ನು ಬೇರೊಬ್ಬರು ಅತಿಕ್ರಮಿಸಿದ್ದು ಇದನ್ನು ಸರಿಪಡಿಸುವಂತೆ ಮಾಡಿರುವ ಮನವಿಯಂತೆ ಸೋಮವಾರದಂದು ಶಾಸಕ ಕೆ. ರಘುಪತಿ ಭಟ್ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷ ಗುರುರಾಜ್ ರಾವ್, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಣೇಶ್ ಕುಲಾಲ್, ಸಹಾಯಕ ಆಯುಕ್ತ ರಾಜು ಕೆ, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಭೂ ಮಾಪನಾಧಿಕಾಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.