ಮೂಡಬಿದಿರೆ : ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವರ ತಂದೆ ಮಿಜಾರುಗುತ್ತು ಆನಂದ ಆಳ್ವ (106) ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಭಾಗವಹಿಸುವ ಕೆಲವೇ ಮಂದಿಗಳಲ್ಲಿ ಆನಂದ ಆಳ್ವರೂ ಒಬ್ಬರಾಗಿದ್ದಾರೆ. ಆನಂದ ಆಳ್ವ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರೀಯಾಶೀಲರಾಗಿ ಗುರುತಿಸಿಕೊಂಡಿದ್ದರು. ಪ್ರಗತಿಪರ ರೈತರೂ ಆಗಿದ್ದು 1979 ರಿಂದ 1989 ರವರೆಗೆ ತಮ್ಮ ವಿಶಾಲವಾದ ಭತ್ತದ ಗದ್ದೆಯಲ್ಲಿ ಕಂಬಳವನ್ನು ಪ್ರವೇಶ ಟಿಕೆಟ್ಗಳೊಂದಿಗೆ ಆಯೋಜಿಸಿದ್ದ ಕೀರ್ತಿ ಕೂಡ ಆನಂದ ಆಳ್ವರಿಗೆ ಸಲ್ಲುತ್ತಿದೆ.
ವರು ತಮ್ಮ ನೆರೆಹೊರೆಯ ಅನೇಕ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಮೃತರು ಮಕ್ಕಳಾದ ಸೀತಾರಾಮ, ಬಾಲಕೃಷ್ಣ ಡಾ.ಮೋಹನ್ ಆಳ್ವ ಮೀನಾಕ್ಷಿ ಸೇರಿದಂತೆ ಅಸಂಖ್ಯಾತ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ದೇವಸ್ಥಾನಗಳ ಜೀರ್ಣೋದ್ದಾರ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದ ಆಳ್ವ ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದವರು. ಮಿಜಾರುಗುತ್ತು ಆನಂದ ಆಳ್ವರು ೧೦೬ನೇ ವಯಸ್ಸಿನಲ್ಲಿ ಕೊನೆಉಸಿರೆಳೆದಿದ್ದಾರೆ.