ಎಂಐಟಿಕೆ ಮತ್ತು ಅನ್ಮಯ ಟೆಕ್ನಾಲಜೀಸ್ ಸಹಭಾಗಿತ್ವ.

ಕುಂದಾಪುರ: ಮೂಡ್ಲಕಟ್ಟೆ ಎಂಐಟಿಕೆ’ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗ, ವಿದ್ಯಾರ್ಥಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಉಡುಪಿಯ ಅನ್ಮಯ ಟೆಕ್ನಾಲಜೀಸ್, ಕಂಪನಿಯೊಂದಿಗೆ ಸಹಭಾಗಿತ್ವದ ಒಪ್ಪಂದಕ್ಕೆ (MoU) ಅಕ್ಟೋಬರ್ 6ರಂದು ಸಹಿ ಮಾಡಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ, ಅನ್ಮಯ ಟೆಕ್ನಾಲಜೀಸ್ ಸಿಇಒ ಹರಿಪ್ರಸಾದ್ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ; ಐ ಎಂ ಜೆ ವಿದ್ಯಾಸಂಸ್ಥೆಗಳ ಪ್ಲೇಸ್ಮೆಂಟ್ಸ್ ಡೀನ್ ಪ್ರೊ. ಅಮೃತ್ಮಾಲಾ; ಎಂ ಐ ಟಿ ಕೆ ವಿದ್ಯಾರ್ಥಿ ಕಲ್ಯಾಣ ಡೀನ್, ಪ್ರೊ.ಅಕ್ಷತಾ ನಾಯ್ಕ್; ಪ್ಲೇಸ್ಮೆಂಟ್ ಡೀನ್, ಪ್ರೊ. ಆದಿತ್ಯ ಮತ್ತು ಇ ಸಿ ಇ ವಿಭಾಗದ ಪ್ರಾಧ್ಯಾಪಕರು ಸಹ ಭಾಗಿಯಾಗಿದ್ದರು.

ಈ ಸಹಭಾಗಿತ್ವವು ವಿ ಎಲ್ ಎಸ್ ಐ ಮತ್ತು ಎಫ್ ಪಿ ಜಿ ಎ ಕ್ಷೇತ್ರಗಳಲ್ಲಿ ತರಬೇತಿ ಮತ್ತು ಪ್ರಾಯೋಗಿಕ ಅನುಭವ ನೀಡಲು ಸಹಕಾರಿ ಆಗಲಿದೆ. ಇದರಲ್ಲಿ ಡಿಜಿಟಲ್ ವಿನ್ಯಾಸ, ಪ್ರೋಟೋಟೈಪಿಂಗ್ ಮತ್ತು ಸುಧಾರಿತ ವೈರ್‌ಲೆಸ್ ಸಿಸ್ಟಂಗಳು ಒಳಗೊಂಡಿವೆ. ಇಂಟರ್ನ್‌ಶಿಪ್‌ಗಳು, ತಾಂತ್ರಿಕ ವರ್ಕ್‌ಶಾಪ್‌ಗಳು ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ, ಈ ಶೈಕ್ಷಣಿಕ ಒಡಂಬಡಿಕೆ, ಅಧ್ಯಯನ ಮತ್ತು ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಗೊಳಿಸಲು, ನವೋದ್ಯಮ, ಸಂಶೋಧನೆ ಮತ್ತು ಪ್ರೌಢ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು ಸಹಕಾರಿ ಯಾಗಲಿದೆ.