ಯೂನಿವರ್ಸಿಟಿ ರೋವರ್ ಚಾಲೆಂಜ್ ಸ್ಪರ್ಧೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ: 21 ನೇ ಸ್ಥಾನ ಗಳಿಕೆ

ಮಣಿಪಾಲ: ಇಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆಯ ವಿದ್ಯಾರ್ಥಿ ತಂಡವು ಜೂನ್ 1 ರಿಂದ 4 ರವರೆಗೆ ಅಮೇರಿಕಾದ ಹ್ಯಾಂಕ್ಸ್ವಿಲ್ಲೆ, ಉತಾಹ್ ನ ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್‌ನಲ್ಲಿ ನಡೆದ ‘ಯೂನಿವರ್ಸಿಟಿ ರೋವರ್ ಚಾಲೆಂಜ್ 2022’ ಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

ಎಂಐಟಿಯ ‘ಮಾರ್ಸ್ ರೋವರ್ ಮಣಿಪಾಲ್’ ತಂಡವು ಸ್ಪರ್ಧೆಯಲ್ಲಿ ಒಟ್ಟಾರೆ 21 ನೇ ಸ್ಥಾನವನ್ನು ಗಳಿಸಿದೆ ಮತ್ತು ಅತ್ಯುತ್ತಮ ವಿಜ್ಞಾನ ತಂಡವಾಗಿ “ಜಾನ್ ಬರೈಂಕಾ ಪ್ರಶಸ್ತಿ”ಯನ್ನು ಸಹ ಗೆದ್ದುಕೊಂಡಿದೆ.

ಯೂನಿವರ್ಸಿಟಿ ರೋವರ್ ಚಾಲೆಂಜ್ ವಾರ್ಷಿಕವಾಗಿ ಅಮೇರಿಕದ ಉತಾಹ್‌ನಲ್ಲಿರುವ ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್ ನಲ್ಲಿ ಬೇಸಿಗೆಯಲ್ಲಿ ದ ಮಾರ್ಸ್ ಸೊಸೈಟಿ ಮೂಲಕ ಆಯೋಜಿಸಲಾಗುವ ಪ್ರಮುಖ ರೊಬೊಟಿಕ್ಸ್ ಸ್ಪರ್ಧೆಯಾಗಿದೆ. ಮಂಗಳನ ಮೇಲಿನ ಭವಿಷ್ಯದ ವಸಾಹತುಗಳಲ್ಲಿ ಮಾನವರ ಜೊತೆಗೆ ಕೆಲಸ ಮಾಡುವ ಸಾಮರ್ಥ್ಯವಿರುವ ರೋವರ್ ಗಳನ್ನು ತಯಾರಿಸುವುದು ಒಂದು ಸವಾಲಿನ ಕೆಲಸವಾಗಿದೆ. ಸ್ಪರ್ಧೆಯ ಪ್ರತಿ ಆವೃತ್ತಿಯು ಬಹು ಸಮಸ್ಯೆ ಹೇಳಿಕೆಗಳನ್ನು ಹೊಂದಿದೆ. ಅಂತಹ ಪರಿಸರದಲ್ಲಿ ಸಂಕೀರ್ಣ ಸಿಸ್ಟಮ್ ವಿನ್ಯಾಸದ ಅವಶ್ಯಕತೆಗಳನ್ನು ಸೆರೆಹಿಡಿಯಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಈ ವರ್ಷ ಜಗತ್ತಿನಾದ್ಯಂತ 36 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ವಿದ್ಯಾರ್ಥಿಗಳ ಸಾಧನೆಗಾಗಿ ಎಂಐಟಿ, ಮಾಹೆಯ ಕುಲಪತಿಗಳು, ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಅವರನ್ನು ಅಭಿನಂದಿಸಿದ್ದಾರೆ.