ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಂಐಟಿ ಕ್ಯಾಂಪಸ್ ಭೇಟಿಗೆ ಅವಕಾಶ

ಮಣಿಪಾಲ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು 11 ಮೇ 2022 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನ ಮತ್ತು ಎಂಐಟಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ.

ಆಚರಣೆಯ ಅಂಗವಾಗಿ, ಸಂಸ್ಥೆಯಲ್ಲಿರುವ ಸೌಲಭ್ಯಗಳ ಕುರಿತು ವೀಕ್ಷಿಸಲು ಮತ್ತು ತಂತ್ರಜ್ಞಾನ ಚಾಲಿತ ಕಲಿಕೆಯ ವಾತಾವರಣದಿಂದ ಪರಿಚಿತರಾಗಲು ಕ್ಯಾಂಪಸ್‌ಗೆ ಭೇಟಿ ನೀಡುವಂತೆ ಎಂಐಟಿ ಸಂಸ್ಥೆಯು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿದೆ. ಯುವ ಉತ್ಸಾಹಿ ವಿದ್ಯಾರ್ಥಿಗಳು ತಂತ್ರಜ್ಞಾನ ಕೇಂದ್ರಿತ ಜಗತ್ತನ್ನ ಪರಿವೀಕ್ಷಿಸುತ್ತಾ ತಮ್ಮ ವೈಜ್ಞಾನಿಕ ಮನೋಭಾವವನ್ನು ಬೆಳಗಿಸಲು ಇದು ಒಂದು ಉತ್ತಮ ಅವಕಾಶವಾಗಿದೆ.

11 ನೇ ಮೇ 2022 ರಂದು ಎಂಐಟಿಗೆ ಭೇಟಿ ನೀಡಲು ಬಯಸುವ ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು, 09 ಮೇ 2022 ರ ಮೊದಲು ಗೂಗಲ್ ಫಾರ್ಮ್ ಲಿಂಕ್ https://tinyurl.com/2p8uz5yp ಅನ್ನು ಭರ್ತಿ ಮಾಡಲು ವಿನಂತಿಸಲಾಗಿದೆ.

ಹೆಸರು ನೋಂದಾಯಿಸಲ್ಪಟ್ಟ ಪ್ರೌಢಶಾಲಾ ವಿದ್ಯಾರ್ಥಿಗಳು ಮೇ 11 ರಂದು ಕ್ವಾಡ್ರಾಂಗಲ್, ಶೈಕ್ಷಣಿಕ ಬ್ಲಾಕ್1 ರಲ್ಲಿ ನಿಗದಿತ ಭೇಟಿಗೆ ಮೂವತ್ತು ನಿಮಿಷಗಳ ಮೊದಲು ಒಗ್ಗೂಡಬೇಕೆಂದು ತಿಳಿಸಲಾಗಿದೆ.