ಉಡುಪಿ: ವ್ಯಕ್ತಿಯೊಬ್ಬರು ಕಾಣೆಯಾಗಿ ಆರು ವರ್ಷದ ಬಳಿಕ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಘಟನೆ ಹೇರೂರಿನಲ್ಲಿ ನಡೆದಿದೆ.
ಹೇರೂರು ಹಾಡಿ ಮನೆ ನಿವಾಸಿ ದೇವರಾಜ ಶೆಟ್ಟಿ (45) ಅವರು 2014ರ ಫೆಬ್ರವರಿ 21ರಿಂದ ಕಾಣೆಯಾಗಿದ್ದರೆಂದು ದೂರು ನೀಡಲಾಗಿದೆ.
ಚಹರೆ: ಈ ವ್ಯಕ್ತಿ 191 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.