ನವದೆಹಲಿ: 21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ಲಭಿಸಿದೆ. 2021ರ ಸಾಲಿನ ಮಿಸ್ ಯೂನಿವರ್ಸ್ ಪಟ್ಟಕ್ಕೆ ಭಾರತದ ಪಂಜಾಬ್ನ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.
ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ “ಮಿಸ್ ಯೂನಿವರ್ಸ್ -2021” ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಸಂಧು, ಪಂಜಾಬ್ನ ಚಂಡಿಘಡ ಮೂಲದರಾಗಿದ್ದಾರೆ. 2017ರಲ್ಲಿ ಮಿಸ್ ಚಂಡಿಘಡ ಪ್ರಶಸ್ತಿ ಪಡೆದಿದ್ದ ಸಂಧುಗೆ ಮೆಕ್ಸಿಕೊದ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ ಕಿರೀಟ ತೊಡಿಸಿದ್ದಾರೆ.
ಇದರೊಂದಿಗೆ 70ನೇ ವಿಶ್ವ ಸುಂದರಿ ಪಟ್ಟ ಹರ್ನಾಜ್ ಸಂಧುಗೆ ಸಿಕ್ಕಿದೆ. ಆ ಮೂಲಕ 21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ದೊರಕಿದೆ. ಈ ಹಿಂದೆ 2000ರಲ್ಲಿ ಲಾರಾ ದತ್ತಾಗೆ ಕೊನೆಯ ಬಾರಿಗೆ ಮಿಸ್ ಯೂನಿವರ್ಸ್ ಪಟ್ಟ ಲಭಿಸಿತ್ತು.