ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, 2026ರ ಏಪ್ರಿಲ್ 6ರಂದು ಮೆಲ್ಕಾರ್‌ನಲ್ಲಿ KA-19-HT-9694 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಯಿತು. ಹಾಗೂ ಏಪ್ರಿಲ್ 28ರಂದು ಬಿಸಿ ರೋಡ್ ಸಮೀಪ KA-05-KG-6785 ಸಂಖ್ಯೆಯ ಮತ್ತೊಂದು ಬೈಕ್‌ನ್ನು ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ವಾಹನ ತಪಾಸಣೆ ವೇಳೆ ಬೆಳಕಿಗೆ ಬಂತು.
ಈ ಎರಡೂ ಪ್ರಕರಣಗಳಲ್ಲಿ ವಾಹನ ಮಾಲೀಕರು ಅಪ್ರಾಪ್ತರಿಗೆ ವಾಹನ ನೀಡಿರುವುದು ಕಂಡುಬಂದ ಹಿನ್ನೆಲೆ, ಬಂಟ್ವಾಳ ಟ್ರಾಫಿಕ್ ಪೊಲೀಸರು ಭಾರತೀಯ ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
2026ರ ಮೇ 18ರಂದು ವಿಚಾರಣೆ ನಡೆಸಿದ ACJM and JMFC Court, ಎರಡೂ ವಾಹನ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ ಆದೇಶ ನೀಡಿದೆ. ಅಪ್ರಾಪ್ತರಿಗೆ ವಾಹನ ನೀಡಿದರೆ ಕಾನೂನು ಕ್ರಮ ಕಠಿಣವಾಗಿರುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

















