ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಕರಾವಳಿ ಕರ್ನಾಟಕಕ್ಕೆ ಮೂರು ಮಂತ್ರಿ ಸ್ಥಾನ ಸಿಕ್ಕಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಭಾಗ್ಯ ಲಭಿಸಿದೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ದ.ಕ. ಜಿಲ್ಲೆಯ ಸುಳ್ಯ ಶಾಸಕ ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಆದರೆ ಕುಂದಾಪುರ ಶಾಸಕ ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ಅದೃಷ್ಟ ಕೈಕೊಟ್ಟಿದ್ದು, ಅವರಿಗೆ ಸಚಿವ ಸ್ಥಾನ ಸಿಗದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ನೂತನ ಸಚಿವರ ಪಟ್ಟಿ ಹೀಗಿದೆ
1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
2. ಆರ್.ಅಶೋಕ್- ಪದ್ಮನಾಭ ನಗರ
3. ಅರವಿಂದ ಲಿಂಬಾವಳಿ- ಮಹದೇವಪುರ
4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು6.ಉಮೇಶ್ ಕತ್ತಿ- ಹುಕ್ಕೇರಿ
7. ಎಸ್.ಟಿ.ಸೋಮಶೇಖರ್- ಯಶವಂತಪುರ
8. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
9. ಬೈರತಿ ಬಸವರಾಜ – ಕೆ ಆರ್ ಪುರಂ
10. ಮುರುಗೇಶ್ ನಿರಾಣಿ – ಬಿಳಿಗಿ
11. ಶಿವರಾಂ ಹೆಬ್ಬಾರ್- ಯಲ್ಲಾಪುರ
12. ಶಶಿಕಲಾ ಜೊಲ್ಲೆ- ನಿಪ್ಪಾಣಿ
13. ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ
14. ಸುನೀಲ್ ಕುಮಾರ್ – ಕಾರ್ಕಳ
15. ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
16. ಗೋವಿಂದ ಕಾರಜೋಳ-ಮುಧೋಳ
17. ಮುನಿರತ್ನ- ಆರ್ ಆರ್ ನಗರ
18. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
21. ಹಾಲಪ್ಪ ಆಚಾರ್ – ಯಲ್ಬುರ್ಗ
22. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
23. ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
24. ಪ್ರಭು ಚೌವ್ಹಾಣ್ – ಔರಾದ್
25. ವಿ ಸೋಮಣ್ಣ – ಗೋವಿಂದ್ ರಾಜನಗರ
26. ಎಸ್ ಅಂಗಾರ-ಸುಳ್ಯ
27. ಆನಂದ್ ಸಿಂಗ್ – ಹೊಸಪೇಟೆ
28. ಸಿ ಸಿ ಪಾಟೀಲ್ – ನರಗುಂದ
29. ಬಿ.ಸಿ. ನಾಗೇಶ್ – ತಿಪಟೂರು