ಉಡುಪಿ: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಏಪ್ರಿಲ್ 30 ರಿಂದ ಮೇ 2 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಏ. 30 ರಂದು ಬೆಳಗ್ಗೆ 10 ಗಂಟೆಗೆ ಕುಂಟಲ್ಪಾಡಿಯಲ್ಲಿ, ಕಾರ್ಕಳ ಕುಂಟಲ್ಪಾಡಿ ರಸ್ತೆಗೆ ಗುದ್ದಲಿ ಪೂಜೆ, 11 ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಹೆಬ್ರಿ ಮತ್ತು ಮರ್ಣೆ ಮಹಾ ಶಕ್ತಿ ಕೇಂದ್ರ ಸಭೆ, ಮಧ್ಯಾಹ್ನ 2.30 ಕ್ಕೆ ಮಣಿಪಾಲ ಉದಯವಾಣಿ ಪ್ರೆಸ್ನಲ್ಲಿ ಸಂವಾದ ಕಾರ್ಯಕ್ರಮ, ಸಂಜೆ 4 ಗಂಟೆಗೆ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ, 5 ಗಂಟೆಗೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಮುಂಡ್ಕೂರು ಮಹಾ ಶಕ್ತಿ ಕೇಂದ್ರ ಸಭೆ, ರಾತ್ರಿ 8.15 ಕ್ಕೆ ನಲ್ಲೂರು ಪರಪ್ಪಾಡಿಯಲ್ಲಿ ಯುವ ಚೇತನ ಯುವಕ ಸಂಘ ವಾರ್ಷಿಕೋತ್ಸವ ಹಾಗೂ 8.45 ಕ್ಕೆ ಕಾರ್ಕಳದ ಕಾಳಿಕಾಂಬ ರಸ್ತೆಯಲ್ಲಿ ಯುವ ಶಕ್ತಿ ಯೂತ್ ಕ್ಲಬ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಕಾರ್ಕಳದಲ್ಲಿ ವಾಸ್ತವ್ಯ ಮಾಡಲಿರುವರು.
ಮೇ 1 ರಂದು ಬೆಳಗ್ಗೆ 9.30 ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಮೆಸ್ಕಾಂ ಕಾರ್ಕಳ ವಿಭಾಗೀಯ ಕಚೇರಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ, 10 ಕ್ಕೆ ಪಕ್ಷದ ಪ್ರಮುಖರೊಂದಿಗೆ ಸಭೆ ಹಾಗೂ 10.30 ಕ್ಕೆ ಕಾರ್ಕಳ ನಗರ, ಕುಕ್ಕುಂದೂರು ಮತ್ತು ಮುಡಾರು ಮಹಾಶಕ್ತಿ ಕೇಂದ್ರ ಸಭೆ ನಂತರ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವರು.
ಮೇ 2 ರಂದು ಬೆಳಗ್ಗೆ 9 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯ ಸಂಕೀರ್ಣದಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, 10.30 ಕ್ಕೆ ಮಣಿಪಾಲ ಎಂ.ಐ.ಟಿ ಕಾಲೇಜು ಬಳಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನೂತನ ಮಣಿಪಾಲ ಶಾಖೆ ಉದ್ಘಾಟನೆ ನೆರವೇರಿಸಿ, ನಂತರ ಮಂಗಳೂರಿಗೆ ತೆರಳಲಿರುವರು.