ಉಡುಪಿ: ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ, ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ವತಿಯಿಂದ ಜ.29 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಕುಂದಾಪುರ, ಕಾರ್ಕಳ ಬೈಲೂರು ಮತ್ತು ಉಡುಪಿ ಪರಿಸರದಲ್ಲಿ ಸೈಟ್ ಸುಪರ್ವೈಸರ್, ಸಿವಿಲ್ ಇಂಜಿನಿಯರ್ ಮತ್ತು ರಿಲಯನ್ಸ್ ಸ್ಮಾರ್ಟ್ ಗೆ ಗ್ರಾಹಕ ಸೇವಾ ಸಹವರ್ತಿ ಮತ್ತು ಕ್ಯಾಷಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಆಸಕ್ತರು ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಆಯೋಜಕ ಮಿಥೇಶ್ ಕುಮಾರ್ ಮೂಡುಕೊಣಾಜೆ ತಿಳಿಸಿದ್ದಾರೆ.