ಬೆಂಗಳೂರು: ಕನ್ನಡದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್(69) ಗುರುವಾರ ನಿಧನರಾಗಿದ್ದಾರೆ.
ಅವರು ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಕನ್ನಡ ಸೇರಿದಂತೆ ಪರಭಾಷೆಗಳಲ್ಲಿಯೂ ಹಾಸ್ಯನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದರು.
ಇವರು 1983ರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದರು. ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಿಮಿಕ್ರಿ ಮಾಡುವಲ್ಲಿ ಖ್ಯಾತರಾಗಿದ್ದರು. ನಟಿ ಕಲ್ಪನಾ ಧ್ವನಿಯನ್ನು ಅನುಕರಿಸುವುದರಲ್ಲಿ ನಿಪುಣರು. ಕಲ್ಪನಾ ಧ್ವನಿಯನ್ನು ಅನುಕರಿಸಿ ಅಭಿಮಾನಿಗಳನ್ನು ಪಡೆದಿದ್ದರು.