ಆರು ಕಿ.ಮೀ. ಹಿಂಬಾಲಿಸಿಕೊಂಡು ಹೋಗಿ ಉದ್ಯಮಿಯಿಂದ ಲಕ್ಷಾಂತರ ರೂ. ದರೋಡೆ

ಬೆಂಗಳೂರು: ಆರು ಕಿ.ಮೀ ಉದ್ಯಮಿಯೊಬ್ಬರ ಕಾರನ್ನು ಹಿಂಬಾಲಿಸಿಕೊಂಡು ಹೋದ ಆರು ಜನ ದರೋಡೆಕೋರರ ತಂಡ ಉದ್ಯಮಿಯಿಂದ ₹ 6 ಲಕ್ಷ ಮೌಲ್ಯದ ರೊಲ್ಯಾಕ್ಸ್ ವಾಚ್ ದರೋಡೆ ಮಾಡಿದ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಉದ್ಯಮಿಯ ಆರು ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ಬುಕ್ ದರೋಡೆ ಮಾಡಿದ್ದಾರೆ. ದರೋಡೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನ. 11ರಂದು ಕೇರಳ ಮೂಲದ ಉದ್ಯಮಿ ಸಮೀಲ್ ಎಂಬುವರು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಲು ತೆರಳಿದ್ದರು. ಈ ವೇಳೆ ಬ್ಯಾಂಕ್ ಅವಧಿ ಮುಗಿದಿದ್ದರಿಂದ ಹಣವನ್ನು ವಾಪಸ್ ಕಾರಿನಲ್ಲಿಟ್ಟುಕೊಂಡು ಕಮ್ಮನಹಳ್ಳಿ ಕಡೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದರೋಡೆಕೋರರನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.