ಮಂಗಳೂರು: ಇತ್ತೀಚೆಗೆ ಕಂಬಳದಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದು ಸುದ್ದಿಯಾದ ಕಂಬಳ ಓಟಗಾರರಾದ ಮಿಜಾರು ಶ್ರೀನಿವಾಸ್ ಗೌಡರಿಗೆ ರಾಷ್ಟ್ರೀಯ ಮಟ್ಟದ ತರಬೇತುದಾರರಿ೦ದ ಕೋಚಿ೦ಗ್ ನೀಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ ನೀಡಿರುವುದು ಈಗ ಹೊಸ ಸುದ್ದಿಗಾಗಿ ಕರಾವಳಿಯ ಕಂಬಳ ಪ್ರಿಯರಲ್ಲಿ ಸಂತಸ ಮೂಡಿದೆ.
ಟ್ವೀಟರ್ ನಲ್ಲಿ ಶ್ರೀನಿವಾಸ ಗೌಡರ ಸಾಧನೆಯನ್ನು ಕೊಂಡಾದಿದ ಆನಂದ್ ಮಹೀಂದ್ರ ಅವರು “ಗೌಡರು ಅಸಾಮಾನ್ಯವಾಗಿ ಓಡಿದ್ದಾರೆ. ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿದರೆ ಈ ವ್ಯಕ್ತಿ ಅದ್ಬುತ ಸಾಧನೆಯನ್ನು ಮಾಡಲು ಸಮರ್ಥರಾಗಿದ್ದಾರೆ ಅನ್ನಿಸುತ್ತದೆ, ಇವರಿಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಕಂಬಳ ಕ್ರೀಡೆಯನ್ನು ಒಲಿಂಪಿಕ್ಸ್ ಗೆ ಸೇರಿಸಬೇಕು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಇದೀಗ ಕ್ರೀಡಾ ಸಚಿವರು ಸ್ಪಂದಿಸಿದ್ದು ಶ್ರೀನಿವಾಸ ಗೌಡರಿಗೆ ತರಬೇತಿ ನೀಡುವುದಾಗಿ ತಿಳಿಸಿರುವುದು ಕರಾವಳಿ ಮಟ್ಟಿಗೇಕೆ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿದೆ.