ಮಾನಸಿಕ ಆರ್ಥಿಕ ಸಬಲತೆ ಮುಖ್ಯ- ಡಾ. ಕಂಠಿ

ಮಾನಸಿಕ ಆರೋಗ್ಯದ ಜೊತೆಗೆ ಆರ್ಥಿಕ ಸಬಲತೆ ಇದ್ದಾಗ ನಿವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಗಿರಿಧರ ಕಂಠಿ ಹೇಳಿದರು. ಅಕ್ಸೆಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನೆಲ್ನ ಸಹಯೋಗದಲ್ಲಿ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತರಾದ ನಂತರ ಮನೆ ಸೇರುವುದನ್ನು ಬಿಟ್ಟು ಜನಜಾಗ್ರತಿ, ಜನರ ಸೇವೆ ಮಾಡಿದಾಗ ಸಮಾಜಕ್ಕೆ ಒಳಿತಾಗುತ್ತದೆ. ಜನರೊಂದಿಗೆ ಬೆರೆತಾಗ ಮನಸ್ಸು ಶುದ್ದಿ ಯಾಗುತ್ತದೆ ಎಂದರು.
ಈ ಶುಭ ಸಂದರ್ಭದಲ್ಲಿ ಡಾಕ್ಟರ್ ಶರೀಫ್, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನಲ್ ನ ಚಂದ್ರಕಾಂತ್ ಭಟ್, ವಿಶ್ವನಾಥ್ ಭಟ್, ಜಯದೀಪ್ ದೇವಾಡಿಗ, ಸುಬ್ರಮಣ್ಯ ಉಡುಪ, ಶ್ರೀಪತಿ ಉಪಾಧ್ಯಾಯ,ಪ್ರಕಾಶ್, ಮಧುಸೂದನ್ ಹೆಗಡೆ ಮತ್ತು ರಕ್ಷಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು