ಸುಳ್ಯ: ಡಿ.16-18 ರವರೆಗೆ ಬೃಹತ್ ಕೃಷಿ ಮೇಳ ಆಯೋಜನೆ

ಸುಳ್ಯ: ಇಲ್ಲಿನ ಚೆನ್ನಕೇಶವ ದೇವಸ್ಥಾನ ಪರಿಸರದಲ್ಲಿ ಡಿ.16,17,18 ರಂದು ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 170 ಕ್ಕೂ ಅಧಿಕ ಕೃಷಿ ಸಂಬಂಧಿ ಮಳಿಗೆಗಳು, ಪಾರಂಪರಿಕ ಗ್ರಾಮ ವೈಶಿಷ್ಟ್ಯ, ತಾರಾಲಯ, ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ಸಚಿವರು, ಸಂಸದರು ಮತ್ತು ಶಾಸಕರು ಭಾಗವಹಿಸಲಿದ್ದಾರೆ.

ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್ ಸುಳ್ಯ, ಸುದ್ದಿ ಬಿಡುಗಡೆ ಮಾಧ್ಯಮ ಸಹಯೋಗದೊಂದಿಗೆ ಸ್ಥಳೀಯ ತಾಲೂಕು ಆಡಳಿತ, ನಗರ ಪಂಚಾಯತ್ ಮತ್ತು ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳ ಸಹಕಾರದೊಂದಿಗೆ ಕೃಷಿ ಮೇಳವನ್ನು ಆಅಯೋಜಿಸಲಾಗುವುದು ಎಂದು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ತಿಳಿಸಿದ್ದಾರೆ.